ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯಲ್ಲಿ ಹೆಚ್.ಜಿ.ಮೋಹನ್ ಎಂಬುವವರು ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದನ್ನು ಪತ್ತೆ ಹಚ್ಚಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಿನಾಂಕ: 22/09/2021 ರಂದು ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯ ನಿವಾಸಿಯಾದ ಮೋಹನ್ ಎಂಬುವವರು ತನ್ನ ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದಾಗಿ ಗೋಣಿಕೊಪ್ಪ ವೃತ್ತ ಸಿ.ಪಿ.ಐ ಎಸ್.ಎನ್.ಜಯರಾಮ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿ ಮೋಹನ್.ಹೆಚ್.ಜಿ ತಂದೆ:ಪೌತಿ ಗಣೇಶ ಪ್ರಾಯ 32 ವರ್ಷ, ಕೂಲಿ ಕೆಲಸ,ದೇವ ಕಾಲೋನಿ, ಹುದೂರು ಹಳ್ಳಿಗಟ್ಟು ಗ್ರಾಮ, ಪೊನ್ನಂಪೇಟೆ ತಾಲ್ಲೂಕು. ರವರು ತನ್ನ ಮನೆಯ ಆವರಣದಲ್ಲಿ ಬೆಳೆದಿದ್ದ ರೂ.50,000/- ಮೌಲ್ಯದ 9 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸ ಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಗೋಣಿಕೊಪ್ಪ ವೃತ್ತ ಸಿ.ಪಿ.ಐ ಎಸ್.ಎನ್.ಜಯರಾಮ್, ಪೊನ್ನಂಪೇಟೆ ಠಾಣಾ ಪಿಎಸ್ಐ ಡಿ.ಕುಮಾರ್ ಹಾಗೂ ಸಿಬ್ಬಂದಿಯವರಾದ ಎಂ.ಡಿ.ಮನು, ಪಿ.ಎ.ಮಹಮದ್ ಅಲಿ, ಕೆ.ಎಸ್.ಮಹೇಂದ್ರ, ಅಬ್ದುಲ್ ಮಜೀದ್, ಮಹದೇಶ್ವರ ಸ್ವಾಮಿ, ಹೇಮಲತಾ ರೈ ,ಅಬ್ದುಲ್ ಬಷೀರ್ ರವರು ಭಾಗವಹಿಸಿದ್ದರು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವಿಕೆ ಮತ್ತು ಮಾರಾಟ, ಮಾದಕ ವಸ್ತುಗಳ ಸಾಗಣಿಕೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ನಂಬರ್ 100 ಅಥವಾ 112 (ERSS) ಸಂಖ್ಯೆಗೆ ದೂರವಾಣಿ ಕರೆ ಮಾಡಿ ಗುಪ್ತವಾಗಿ ಮಾಹಿತಿಯನ್ನು ನೀಡಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸಹಕರಿಸುವಂತೆ ಕೋರಲಾಗಿದೆ. (*ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು)
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,