ಮಾನ್ಯ ಶ್ರೀ ಟಿ.ಎಂ.ವಿಜಯಬಾಸ್ಕರ್ ಐಎಎಸ್, ನಿವೃತ್ತ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು, ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರವರು ಹಾಗೂ ಶ್ರೀ ಪ್ರಸನ್ನ ಕುಮಾರ್, ಮಾನ್ಯ ನಿವೃತ್ತ ಐಎಎಸ್ ಅಧಿಕಾರಿಗಳುರವರಿಂದು ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆ, ಹರಿಹರ ಅಗ್ನಿಶಾಮಕ ಕಚೇರಿ, ಸಿಇಎನ್ ಠಾಣೆ ಗಳಿಗೆ ಭೇಟಿ ನೀಡಿ ಆಡಳಿತ ಸುಧಾರಣೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಲಹೆಗಳನ್ನು ಪಡೆದರು. ನಂತರ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ದಾವಣಗೆರೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ವಿಶೇಷ ಘಟಕಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಅಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆದರು.
ಈ ಸಮಯದಲ್ಲಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರು ಹಾಗೂ ಶ್ರೀ ನಾಗೇಶ್, ಸಹಾಯಕ ಆಡಳಿತಾಧಿಕಾರಿಗಳು, ಡಿವೈಎಸ್ಪಿ ರವರಾದ ಬಸವರಾಜ ಬಿ.ಎಸ್., ಶ್ರೀ ನರಸಿಂಹ ವಿ.ತಾಮ್ರದ್ವಜ, ನಾಗೇಶ್ ಐತಾಳ್, ಶ್ರೀ ಸಂತೋಷ್ ಕೆ.ಎಂ ಹಾಗೂ ವಿಶೇಷ ಘಟಕಗಳ ಅಧಿಕಾರಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,