Aug, 2025: ನೇ ಬುಧವಾರ, ನೋಡಲ್ ಅಧಿಕಾರಿಯಾಗಿ ಡಾ! ವೆಂಕಟಗಿರಿ ಪಶುವೈದ್ಯರು ಶಿರ್ವ, ಅಧ್ಯಕ್ಷರು ಶ್ರೀಮತಿ ಸವಿತಾ, ಉಪಾಧ್ಯಕ್ಷರು ಶ್ರೀ ವಿಲ್ಸನ್ ಹೆರಾಲ್ಡ್ ರೊಡ್ರಿಗಸ್, ಪಿ.ಡಿ.ಒ ಶ್ರೀ ಅನಂತ ಪದ್ಮನಾಭ ನಾಯಕ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಸಭೆಯಲ್ಲಿ ಸರಿಸುಮಾರು 276 ಸಾರ್ವಜನಿಕರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಶಿರ್ವ ಸಮುದಾಯ ಆಸ್ಪತ್ರೆಯ ಡಾ! ಗಾಯತ್ರಿಯವರು ಆರೋಗ್ಯ ಇಲಾಖೆ ಬಗ್ಗೆ ತಿಳಿಸಿದರು. ಅಂಗನವಾಡಿ ಶ್ರೀಮತಿ ಶೋಭಾ ಶೆಟ್ಟಿ, ಮೆಸ್ಕಾಂ ಎಸ್.ಒ ಶ್ರೀ ಮಂಜಪ್ಪ, ಜಲಜೀವನ್ ಮಿಶನ್ ನ ಇಂಜಿನಿಯರ್ ರಮೇಶ್, ಶಿಕ್ಷಣ ಇಲಾಖೆಯ ಶಿವಣ್ಣ ಇವರುಗಳು ತಮ್ಮ ಇಲಾಖೆಯ ಬಗ್ಗೆ ತಿಳಿ ಹೇಳಿದರು. ಕಂದಾಯ ಇಲಾಖೆಯ ಬಗ್ಗೆ ವಿ.ಎ ಶ್ರೀಮತಿ ಶ್ವೇತಾ ರವರು ಪೌತಿ ಖಾತೆಯಲ್ಲಿ ಜಾಗದ ಆರ್‌ಟಿಸಿ ದಾರರು ಮತಪಟ್ಟರೆ ತಾಲೂಕು ಕಚೇರಿಗೆ ಹೋಗುವ ಅಗತ್ಯವಿಲ್ಲ. ಗ್ರಾಮದ ವಿ.ಎ ಕಚೇರಿಯಲ್ಲಿಯೂ ಸಂತತಿನಕ್ಷೆಯನ್ನು ಮತ್ತು ವಾರೀಸುದಾರರ ಆಧಾರ್ ಕಾರ್ಡ್ ತಂದರೆ ಸರ್ವೆ ವಿಲೇವಾರಿ ಮಾಡಿ ಆರ್‌ಟಿಸಿ ಯನ್ನು ಬದಲು ಮಾಡಿಕೊಡುವುದಾಗಿ ತಿಳಿಸಿದರು. ದರ್ಕಾಸ್ ಪೊಡಿ ಸರಕಾರದಿಂದ ಮಂಜೂರಾದ ಜಾಗವನ್ನು ಇಲಾಖೆಯ ಸುಮೊಟೊ ನಲ್ಲಿ ಉಚಿತವಾಗಿ ವಾರಿಸುದಾರರ ಹೆಸರಿಗೆ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಶಿರ್ವದಲ್ಲಿ ಸಂಧ್ಯಾಸುರಕ್ಷೆ 1110 ಮಂದಿ, ವಿಧವೆ ವೇತನ 475 ಮಂದಿ, ಇಂದಿರಾಗಾಂಧಿ ಪೆನ್ನನ್ ಯೋಜನೆ 140 ಮಂದಿ, ಅಂಗಲವಿಕಲರ ವೇತನ 211 ಮಂದಿ ತೆಗೆದುಕೊಳ್ಳುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು. ಪೋಲಿಸ್ ಇಲಾಖೆಯ ಪಿ.ಸಿ ಮಂಜುನಾಥ್ ಅಡಿಗ ಮಾತನಾಡಿ, ಕರ್ನಾಟಕ ಸರಕಾರದ ಯೋಜನೆ ಮನೆ ಮನೆಗೆ ಪೋಲಿಸ್ ನ್ನು ಶಿರ್ವದಲ್ಲಿ ಅಳವಡಿಸಿಕೊಂಡಿದ್ದೇವೆ. ಶಿರ್ವದಲ್ಲಿ 13369 ಜನಸಂಖ್ಯೆ ಇದ್ದು 5000 ಮನೆಗಳಿವೆ. ಈವರೆಗೆ 150 ಮನೆಗೆ ಭೇಟಿ ಮಾಡಿರುತ್ತೇವೆ. ನಶೆ ಮುಕ್ತ ಭಾರತ ವನ್ನು ಮಾಡುವ ಸಂಬಂಧಿ ಕ್ಯುಆರ್ ಕೋಡ್ ನ್ನು ಶಾಲೆಯ ಗೇಟಿನ ಹತ್ತಿರ ಅಳವಡಿಸಿದ್ದೇವೆ. ಯಾರೂ ಕೂಡ ನಶೆಯಲ್ಲಿದ್ದರೆ ಕೂಡಲೆ ಕ್ಯುಆರ್ ಸ್ಕ್ಯಾನ್ ಮಾಡಿ ದೂರು ಕೊಡಬಹುದು. ಅವರ ಮಾಹಿತಿಯನ್ನು ಗೋಪ್ಯವಾಗಿಡುತ್ತೇವೆ. ಸಾರ್ವಜನಿಕರಿಗೆ ಉಚಿತ ಬಂದೂಕು ತರಬೇತಿಯನ್ನು ಹಮ್ಮಿಕೊಂಡಿದ್ದೇವೆ. ಅದರ ಅಪ್ಲಿಕೇಶನ್ ಠಾಣೆಯಲ್ಲಿ ದೊರೆಯುತ್ತದೆ. ಸೈಬರ್ ಕ್ರೈಮ್‌ನಲ್ಲಿ ತುಂಬಾ ಜನ ಹಣ ಕಳಕೊಂಡಿರುತ್ತಾರೆ. ಈಗ ಹೊಸದಾಗಿ ಮೊಬೈಲ್‌ಗೆ ವೀಡಿಯೊ ಕಾಲ್ ಬರುತ್ತದೆ. ಅದನ್ನು ಸ್ವೀಕರಿಸುವಾಗ ಮುಂದಿನ ಕ್ಯಾಮರಾವನ್ನು ಮುಚ್ಚಿ ಮಾತನಾಡಬೇಕಾಗಿ ಕೇಳಿಕೊಂಡರು. ಶಿರ್ವದ ಸಾರ್ವಜನಿಕರ ಅಹವಾಲು ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುವವರ ಸಮಸ್ಯೆ. ಬಸ್ ಸ್ಟ್ಯಾಂಡಿನಲ್ಲಿ ಇತರ ವಾಹನಗಳ ಪಾರ್ಕಿಂಗನ್ನು ನಿಷೇಧಿಸಬೇಕು ಎಂದಾಗ ಇಲಾಖೆಯ ಮೇಲಾಧಿಕಾರಿಯವರಿಗೆ ಮನವರಿಕೆ ಮಾಡಿ ಶೀಘ್ರದಲ್ಲಿ ಪರಿಹರಿಸುವ ಭರವಸೆಯನ್ನು ಕೊಟ್ಟರು.

ಪಿ.ಡಿ.ಒ ಅನಂತ ಪದ್ಮನಾಭರವರು ಸ್ವಾಗತಿಸಿ, ಪಂಚಾಯತ್ ಸದಸ್ಯ ರಾಮರಾಯ್ ಪಾಟ್ಕರ್ ವಂದಿಸಿದರು. ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಇರುವ ಶಾಲಾ ಕಾಲೇಜುಗಳಿಗೆ ತೆರಿಗೆ ವಸೂಲಿ ವಾರೆಂಟು ಹೊರಡಿಸಿ ವಸೂಲಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದರು
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ