ಅಕ್ರಮ ಗಾಂಜಾ ಮಾರಾಟ ಪ್ರಕರಣ ಪತ್ತೆ, ಆರೋಪಿ ಬಂಧನ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರನಗರ ಜಂಕ್ಷನ್ ನಲ್ಲಿರುವ ಬಸ್ಸು ತಂಗುದಾಣದಲ್ಲಿ ಸುಮಾರು 1 ಕೆ.ಜಿ 290 ಗ್ರಾಂ ಗಾಂಜಾವನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಶಾಲನಗರ ಸುತ್ತ-ಮುತ್ತ ಹಾಗೂ ಶಾಲಾ ಕಾಲೇಜಿನ ಆವರಣಗಳಲ್ಲಿ ಗಾಂಜಾ ಸೇವನೆ ಅಧಿಕವಾಗಿರುವುದಾಗಿ ಮಾಹಿತಿಗಳು ತಿಳಿದುಬಂದಿದ್ದರಿಂದ ಗಾಂಜಾ ಸೇವನೆಗೆ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ, ಕ್ಷೀಪ್ರ ಕಾರ್ಯಾಚರಣೆ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಚೇತನ್ ಎಂ.ತಂದೆ ಲೇಟ್ ಪೌತಿ ಮಾದೇವ 20 ವರ್ಷ, ಕೂಲಿ ಕೆಲಸ, ವಾಸ ಬಸವನತ್ತೂರು ಕೂಡುಮಂಗಳೂರು ಗ್ರಾಮ ಎಂಬುವವರನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 1 ಕೆ.ಜಿ 290 ಗ್ರಾಂ ಗಾಂಜಾ, ಕೆಎ-12 ಕ್ಯೂ-7276 ನಂಬರಿನ ಬೈಕ್, 1 ಮೊಬೈಲ್ ಫೋನ್ ವಶಪಡಿಸಿಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಶಿವಶಂಕರ್ ರವರ ನೇತೃತ್ವದಲ್ಲಿ ಪ್ರೋಪೇಷನರಿ ಪಿ.ಎಸ್.ಐ ಶ್ರವಣ.ಎಸ್.ಡಿ, ಎಎಸ್ಐ ಸ್ವಾಮಿ, ಸಿಬ್ಬಂದಿಯವರಾದ ಪ್ರಸನ್ನ, ದಯಾನಂದ, ಸಜಿ, ಎ.ಮಂಜುನಾಥ್, ವಿವೇಕ್ , ಶಾಫಿನ್ ಅಹಮ್ಮದ್ ರವರು ಪತ್ತೆ ಮಾಡಿದ್ದು ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,