ವರ್ತೂರು ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಕಳ್ಳತನದ ಬಗ್ಗೆ ಭಾತ್ಮಿಧಾರರಿಂದ
ಖಚಿತ ಮಾಹಿತಿ ಪಡೆದುಕೊಂಡು, ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯ ದ್ವಿ-ಚಕ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನಿಂದ ಒಟ್ಟು Rs. 15,00,000/- ಮೌಲ್ಯದ 24 ದ್ವಿ-ಚಕ್ರ ವಾಹನಗಳು ಹಾಗೂ 08 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ತಲೆಮರೆಸಿಕೊಂಡಿರುವ ಮತ್ತೊಬ್ಬ ವ್ಯಕ್ತಿಯ ಪತ್ತೆಗಾಗಿ ಹೆಚ್ಚಿನ ತನಿಖೆ ಕೈಕೊಳ್ಳಲಾಗಿದೆ.
ಈ ಘಟನೆಗೂ ಮುನ್ನಾ ಇಂತಹ ರೀತಿಯಲ್ಲಿ ಯಾವುದಾದರೂ ಕೃತ್ಯಗಳನ್ನು ಎಸಗಿದ್ದಲ್ಲಿ ನೊಂದವರು ಹೆದರದೆ ದೈರ್ಯವಾಗಿ ಡಿ.ಸಿ.ಪಿ. ವೈಟ್ ಫೀಲ್ಡ್ ವಿಭಾಗ ಮೊಬೈಲ್ ನಂ. 9480801084, ಎ.ಸಿ.ಪಿ. ಮಾರತ್ತಹಳ್ಳಿ ಉಪ ವಿಭಾಗ ಮೊಬೈಲ್ ನಂ. 9480801607 ಅಥವಾ ಪೊಲೀಸ್ ಇನ್ಸ್‌ಪೆಕ್ಟರ್, ವರ್ತೂರು ಪೊಲೀಸ್ ಠಾಣೆ ಮೊಬೈಲ್ 9480801618 ರವರನ್ನು ನೇರವಾಗಿ ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡಬಹುದಾಗಿದೆ.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಶಿವಕುಮಾರ್. ರವರ ಮಾರ್ಗದರ್ಶನದಲ್ಲಿ, ಶ್ರೀಮತಿ ಪ್ರಿಯದರ್ಶಿನಿ ಈಶ್ವರ್ ಸಾಣೇಕೊಪ್ಪ, ಸಹಾಯಕ ಪೊಲೀಸ್ ಆಯುಕ್ತರು, ಮಾರತ್ತಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ, ವರ್ತೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.