ಉತ್ತರಕನ್ನಡ ಜಿಲ್ಲಾ ಪೊಲೀಸರಿಂದ ಒಂದು ದಿನದ ತರಬೇತಿ ಕಾರ್ಯಕ್ರಮ

John Prem
3 0
Read Time:2 Minute, 23 Second

ದಿನಾಂಕ 09-04-2022 ರಂದು ಉತ್ತರವ ಕನ್ನಡ ಜಿಲ್ಲಾ ಅಭಿಯೋಜನೆ‌ ಇಲಾಖೆ ಮತ್ತು ಉತ್ತರ‌ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಭವನದಲ್ಲಿ.. ದಂಡ ಪ್ರಕ್ರಿಯಾ ಸಂಹಿತೆ ಕಲಂ. 293 ಅಡಿಯಲ್ಲಿ ವಿಧಿ ವಿಜ್ಯಾನ ಪ್ರಯೋಗಾಲಯದ ವರದಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮತ್ತು ವಿಡಿಯೋ ಕಾನ್ಪರೆನ್ಸ್ ಮೂಲಕ ಸಾಕ್ಷೀದಾರರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳುವ ಬಗ್ಗೆ ಜರುಗಿದ ಒಂದು ದಿನದ‌ ತರಬೇತಿ‌ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.. ತರಬೇತಿ‌ ಕಾರ್ಯಾಗಾರವನ್ನುಶ್ರೀ ಸಿ.ರಾಜಶೇಖರ್ ಮಾನ್ಯ ನ್ಯಾಯಾಧೀಶರು ಪ್ರಧಾನ & ಜಿಲ್ಲಾ ಸತ್ರ ನ್ಯಾಯಾಲಯ ಉ.ಕ ಕಾರವಾರ ರವರು ಉದ್ಘಾಟಿಸಿದರು..ಡಾ|| ಸುಮನ್ ಪೆನ್ನೇಕರ್ ಮಾನ್ಯ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು‌ ಕಾರ್ಯಾಗಾರದ ಅದ್ಯಕ್ಷತೆಯನ್ನು ವಹಿಸಿದ್ದರು ಅಥಿತಿಗಳಾಗಿ : ಶ್ರೀ ಏನ್.ಎಮ್. ರಮೇಶ ಮಾನ್ಯ ಮುಖ್ಯ ನ್ಯಾಯಿಕ ದಂಢಾಧಿಕಾರಿಗಳು.. ಸಿ.ಜೆ.ಎಮ್. ನ್ಯಾಯಾಲಯ ಕಾರವಾರ ರವರು ಉಪನ್ಯಾಸಕರಾಗಿ ಪಾಲ್ಗೊಂಡಿದ್ದರು ಅತ್ಯುತ್ತಮವಾಗಿ ವಿಷಯವನ್ನು ಮನದಟ್ಟು ಮಾಡಿದರು. ಶ್ರೀಮತಿ ತನುಜಾ ಹೊಸಪಟ್ಟಣ ಸರಕಾರಿ ಅಭಿಯೋಜಕರು ಜಿಲ್ಲಾ & ಸತ್ರ ನ್ಯಾಯಾಲಯ ಕಾರವಾರ ಇವರು ಕಾರ್ಯಕ್ರಮವನ್ನು ಸಂಯೋಜಿಸಿದಲ್ಲದೇ ಕಾರ್ಯಕ್ರಮವು ಸುಗಮವಾಗಿ ಮತ್ತು ಯಶಸ್ವಿ ಯಾಗಿ ಮುಗಿಯುವಲ್ಲಿ ಮುಖ್ಯ ಪಾತ್ರ ವಹಿಸಿದರು ಶ್ರೀ ರಾಜೇಶ ಎಮ್ ಮಳಗಿಕರ್ ಸರಕಾರಿ ಅಭಿಯೋಜಕರು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶಿರಸಿ ರವರು ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ ವಂದಿಸಿದರು. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಅಭಿಯೋಜಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು ಜಿಲ್ಲೆಯ ಎಲ್ಲಾ ನ್ಯಾಯಾಲಯದ‌ 45 ಸರಕಾರಿ ಅಭಿಯೋಜಕರು ಹಾಗೂ 32 ಪೊಲೀಸ್ ಅಧಿಕಾರಿ /ಸಿಬ್ಬಂದಿಗಳು ತರಬೇತಿಯ ಸದುಪಯೋಗ ಪಡೆದುಕೊಂಡಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಅಂತರರಾಜ್ಯ ಕಳ್ಳರ ಬಂಧನ ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶಕ್ಕೆ

ದಿನಾಂಶ:05-04-2022 ರಂದು ಫಿರ್ಯಾದಿ ಶ್ರೀ ನಾಗರಾಜ ಸುರೇಶ ಗಾಂವಕರ ಇವರು ಠಾಣೆಗೆ ಬಂದು ಚೆಂಡಿಯಾದಲ್ಲಿ ತಾವು ಅರ್ಚಕರಾಗಿರುವ ಶ್ರೀ ನವ ಚಂಡಿಕಾ ದೇವಿ ದೇವಸ್ಥಾನದ ಪಕ್ಕದ ಬಾಗಿಲನ್ನು ಒಡೆದು ದೇವಸ್ಥಾನದ ಒಳಗೆ ಪ್ರವೇಶಿಸಿ ಒಳಗಡೆಯಿದ್ದ ದೇವಿಯ ಬೆಳ್ಳಿ, ಬಂಗಾರದ ಆಭರಣಗಳು, ಮತ್ತು ನಗದು ಹಣ, ಒಟ್ಟು ಸೇರಿ, ಸುಮಾರು 3,77,000/- ಮೌಲ್ಯದ ಸ್ವತ್ತು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ನೀಡಿದ ದೂರನ್ನು ಕಾರವಾರ ಗ್ರಾಮೀಣ ಪೊಲೀಸ್ […]

Get News on Whatsapp

by send "Subscribe" to 7200024452
Close Bitnami banner
Bitnami