ರಾಜ್ಯ ಸರ್ಕಾರವು ರಾಜ್ಯದಲ್ಲಿ ಹುಕ್ಕಾ ಸಂಗ್ರಹಣೆ/ಮಾರಾಟ/ಸೇವನೆಯ ಮೇಲೆ ನಿಷೇಧಿಸಿರುತ್ತದೆ. ಅದೇ ಪ್ರಕಾರ ದಿನಾಂಕ 25/03/2024 ರಂದು ಬೆಂಗಳೂರು ನಗರ ಸಿಸಿಬಿಯ ಸಂಘಟಿತ ಅಪರಾಧ ದಳ(ಪಶ್ಚಿಮ) ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಅಶೋಕ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಒಂದು ಹುಕ್ಕಾ ಕೇಂದ್ರದ ಮೇಲೆ ದಾಳಿ ನಡೆಸಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ.
ದಾಳಿ ಸಮಯದಲ್ಲಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇವರುಗಳ ವಶದಿಂದ .21 000/- (ಇಪ್ಪತ್ತೊಂದು ಸಾವಿರ ರೂಪಾಯಿ) ನಗದು, ಹುಕ್ಕಾ ಪಾಟ್‌ಗಳು, ಪೈಪ್‌ಗಳು, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರ್ದ ಪ್ರಕಾರ ಸಿಸಿಬಿಯ ವಿಶೇಷ ವಿಚಾರಣಾ ದಳ ಅಧಿಕಾರಿಗಳವರಿಗೆ ದಿನಾಂಕ: 30/03/2024 ರಂದು ವಿಧಾನಸೌಧ ಪೊಲೀಸ್ ಠಾಣಾ ಸರಹದ್ದಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಹಾಲ್‌ಮಾರ್ಕ್ ಬಿಲ್ಡಿಂಗ್‌ನಲ್ಲಿ ಕಾನೂನು ಬಾಹಿರವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ್ತಿರುತ್ತದೆ. ಈ ಮಾಹಿತಿಯ ಮೇರೆಗೆ ಸಿಸಿಬಿಯ ಅಧಿಕಾರಿಗಳು ದಾಳಿ ನಡೆಸಿರುತ್ತಾರೆ. ದಾಳಿ ನಡೆಸಿದ ಸ್ಥಳವು ಒಂದು ಹುಕ್ಕಾಬಾರ್ ಆಗಿದ್ದು, ಅದರಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನ್ನು ಓರ್ವ ವ್ಯಕ್ತಿಯು ಮೊಬೈಲ್‌ನ ವಿವಿಧ ಆಫ್/ವೆಬ್‌ಸೈಟ್‌ಗಳನ್ನು ಬಳಸಿಕೊಂಡು ಜೂಜಾಟದಲ್ಲಿ ತೊಡಗಿರುವುದು ಹಾಗೂ ಮೊಬೈಲ್‌ನ ವ್ಯಾಟ್ಸಪ್ ಮೂಲಕ ಪ್ರಮುಖ ಬುಕ್ಕಿಯೊಂದಿಗೆ ಸಂಪರ್ಕದಲ್ಲಿರುವುದು ಕಂಡು ಬಂದಿರುತ್ತದೆ.
ಈ ರೀತಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಯನ್ನು ವಶಕ್ಕೆ ಪಡೆದುಕೊಂಡು ಆತನಿಂದ ಒಂದು ಐ-ಫೋನ್-14 ಪ್ರೋಮ್ಯಾಕ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬುಕ್ಕಿಯ ವಿರುದ್ಧ ಈ ಹಿಂದೆ ಬೆಂಗಳೂರಿನ ಸಿಟಿಮಾರ್ಕೆಟ್ ಮತ್ತು ಕಮರ್ಷಿಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿರುತ್ತವೆ.
ಮುಂದುವರೆದು ಹುಕ್ಕಾಬಾರ್‌ಗೆ ಸಂಬಂಧಿಸಿದಂತೆ ಹುಕ್ಕಾಬಾರ್ ನಡೆಸುತ್ತಿದ್ದ ಮಾಲೀಕ ಮತ್ತು ಅಲ್ಲಿನ 06 ಜನ ಕೆಲಸಗಾರರು ಹಾಗೂ ಹುಕ್ಕಾ ಸೇವನೆ ಮಾಡುತ್ತಿದ್ದ 12 ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅಲ್ಲದೆ ಹುಕ್ಕಾ ಸೇವನೆಗೆ ಬಳಸಲಾಗುತ್ತಿದ್ದ 1) ಹುಕ್ಕಾ ಚಿಲುಮೆ-16 2) ಹುಕ್ಕಾ ಪೈಪುಗಳು-17 3) ಹುಕ್ಕಾ
ಸ್ಟ್ಯಾಂಡ್‌ಗಳು-09 4)ಕ್ಯೂ ಆರ್ ಕೋಡ್ ಫುಡ್ ಮನು-1 ಇತರ ವಸ್ತುಗಳನ್ನು ವರಪಡಿಸಿಕೊಳ್ಳಲಾಗಿದೆ. ಹುಕ್ಕಾ ಸೇವನೆ ಮಾರಾಟದ ಒಟ್ಟು ಹಣ 1,20,000/- ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಂಡಿರುತ್ತೆ. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.