ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿಯ ಸ್ಪೆಷಲ್ ಕೇಸ್ ನಂಬರ್ 08/2026 (ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 116/2025 U/s 3(1),R, 3(1),S, 3(2),V-A, SC/ST Act ಮತ್ತು 352, 351(2), 118 (1),23,8,3(5)BNS ಹಾಗೂ 3(1),181MV Act) ರಲ್ಲಿ ಸುಮಾರು 1 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯಾದ ಮಹಮ್ಮದ್ ಅಕ್ರಂ S/o. ಮಹಮ್ಮದ್ ರಫೀಕ್ R/o ತೌಹಿದ್ ಮೊಹಲ್ಲಾ ರಸ್ತೆ, ಹೂಡೆ, ಪಡುತೋನ್ಸೆ ಗ್ರಾಮ ಎಂಬುವರನ್ನು ಠಾಣಾ ವಾರೆಂಟ್ ಸಿಬ್ಬಂದಿಗಳಾದ HC ಸುರೇಶ್ ಕುಮಾರ್, HC ವಿಶ್ವನಾಥ್ ಮತ್ತು HC ಆದರ್ಶ, WPC ಮಹಾಲಕ್ಷ್ಮಿ ಮತ್ತು ಪಿಎಸ್ಐ ಹುಸೇನ್ ಸಾಬ್( ತನಿಖೆ ) ರವರು ಈ ದಿನ ದಿನಾಂಕ 10/03/2026 ಹೂಡೆಯಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ವಾರೆಂಟ್ ಆಸಾಮಿಗೆ ದಿನಾಂಕ :27/03/2026 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







