ಶಿರ್ವ ಗ್ರಾಮ ಪಂಚಾಯತ್ 2.80 ಕೋಟಿ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಸಚಿವೆ ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ನ ವೆಂಬರ್ 1 ರಂದು ಶಿರ್ವ ಮಹಿಳಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉಡುಪಿ ಇದರ ವತಿಯಿಂದ ಶಿರ್ವ ಗ್ರಾಮ ಪಂಚಾಯಿತಿಗೆ ಸುಮಾರು 2.8 ಕೋಟಿ ವೆಚ್ಚದ ಗ್ರಾಮೀಣ ರಸ್ತೆಗಳಿಗೆ ಉಡುಪಿ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಶಂಕುಸ್ಥಾಪನೆ ನೆರವೇರಿಸಿದರು .ಈಗಾಗಲೇ ಕಾಪುಕ್ಷೇತ್ರಕ್ಕೆ 10 ಕೋಟಿ ಅನುದಾನ ಬಿಡುಗಡೆ ಗೊಂಡಿದ್ದು ಮುಂದಿನ ದಿನಗಳಲ್ಲಿ ಕಾಪು ಕ್ಷೇತ್ರವನ್ನು ಅಭಿವೃದ್ಧಿ ಕ್ಷೇತ್ರವಾಗಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಸಚಿವೆ ಹೆಬ್ಬಾಳ್ಕರ್ ರವರು ಆಶ್ವಾಸನೆ ನೀಡಿದರು. ಶಿರ್ವ ಗ್ರಾಮವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅತಿ ಉತ್ತಮವಾದ ಆಡಳಿತ ನಡೆಸುತ್ತಿದ್ದು ಶಿರ್ವ ಗ್ರಾಮದ ಅಭಿವೃದ್ಧಿಯನ್ನು ಕಂಡು ಮುಂದಿನ ದಿನಗಳಲ್ಲಿ ಶಿರ್ವ ಪಂಚಾಯತ್ ಅನ್ನು ಪಟ್ಟಣ ಪಂಚಾಯತಾಗಿ ಮೇಲ್ದರ್ಜೆಗೆ ಏರಿಸಲು ಸತತವಾಗಿ ಪ್ರಯತ್ನ ನಡೆಸುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒತ್ತಿ ಹೇಳಿದರು ಇದರೊಂದಿಗೆ ಕಾಪು ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಅಕ್ಕ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು ಸಭೆಯ ಅಧ್ಯಕ್ಷ ತೆ ವಹಿಸಿದ ಕಾಪು ಶಾಸಕ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಇವರು ಮಾತನಾಡಿ ಕಾಪು ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕಾಗಿ ಉಸ್ತುವಾರಿ ಸಚಿವೆಯೊಂದಿಗೆ ಮನವಿ ಮಾಡಿಕೊಂಡರು ಶಿರ್ವ ಗ್ರಾಮ ಪಂಚಾಯತಿಯಿಂದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರಿಗೆ ಸನ್ಮಾನ ಮಾಡಲಾಯಿತು ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆಯವರು ನೀರಿನ ಸಮಸ್ಯೆಯನ್ನು ಪರಿಹರಿಸಲು ಸುಮಾರು 26 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಸವಿತಾ ರಾಜೇಶ್, ಉಪಾಧ್ಯಕ್ಷ ಶ್ರೀ ವಿಲ್ಸನ್ ರೊಡ್ರಿಗಸ್ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀ ನವೀನ್ ಚಂದ್ರ ಸುವರ್ಣ, ಕಾಪು ತಹಶೀಲ್ದಾರ್ ಅನಂತ ಶಂಕರ ಕ್ರಿಶ್ಚನ್ ಅಭಿವೃದ್ಧಿ ನಿಗಮದ ಶ್ರೀ ಪ್ರಶಾಂತ್ ಜತ್ತನ್ನ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರಿ ಜೇಮ್ಸ್ ಡಿ ಸಿಲ್ವ, ಭೂ ನ್ಯಾಯ ಮಂಡಳಿಯ ಸದಸ್ಯರಾದ ಶ್ರೀ ಮೆಲ್ವಿನ್ ಡಿಸೋಜಾ, ಬ್ಲಾಕ್ ಅಧ್ಯಕ್ಷರಾದ ವೈ ಸುಕುಮಾರ್, ಶ್ರೀ ದಿವಾಕರ್ ಶೆಟ್ಟಿ, ಕಾಪು ಸಿಎ ಬ್ಯಾಂಕಿನ ಅಧ್ಯಕ್ಷರು, ಶ್ರೀಮತಿ ಗೀತಾ ವಾಗ್ಲೆ ಬಂಟಕಲ್ಲು, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
ಶಿರ್ವ ಗ್ರಾಮ ಪಂಚಾಯತ್ ಪಿಡಿಓ ಶ್ರೀ ಅನಂತ ಪದ್ಮನಾಭ ನಾಯಕ್ ಸ್ವಾಗತಿಸಿ ವಂದಿಸಿದರು
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







