ಕಳೆದುಕೊಂಡಿದ್ದ 10 ಗ್ರಾಂ ಚಿನ್ನ, ಮೊಬೈಲ್, 10,000/- ನಗದು ಇದ್ದ ಬ್ಯಾಗನ್ನು ಪತ್ತೆ ಹಚ್ಚಿ ವಾರಸುದಾರಿಗೆ ಮರಳಿಸಿದ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು.
R.M ಕಾಲವಾಡ ಎಂಬುವರು ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಮೊಬೈಲ್, ಹಣ & ಬಂಗಾರ ಇದ್ದ ಬ್ಯಾಗ್ ಕಳೆದುಕೊಂಡಿದ್ದರ ಬಗ್ಗೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಬಂದು ತಿಳಿಸಿದ್ದು ತಕ್ಷಣ ಕಾರ್ಯಪ್ರವೃತ್ತರಾದ ASI Y.F ದಾಸಣ್ಣವರ & ಸಿಬ್ಬಂದಿಗಳಾದ ರವಿರಾಜ ಕೆಂದೂರ, ರಾಮರಾವ್ ರಾಠೋಡ, ಕನಕಪ್ಪ ರಗಣಿ, R.M ಹೊರಟ್ಟಿ ತಾಂತ್ರಿಕ ಸಹಾಯದಿಂದ ದೂರುದಾರರು ಕಳೆದುಕೊಂಡಿದ್ದ ಮೊಬೈಲ್, 10,000/- ನಗದು & 10 ಗ್ರಾಂ ಬಂಗಾರ ಒಳಗೊಂಡಿದ್ದ ಬ್ಯಾಗನ್ನು ಪತ್ತೆ ಹಚ್ಚಿ ವಾರಸುದಾರಿಗೆ ಮರಳಿಸಿರುತ್ತಾರೆ.