ಪಿರ್ಯಾದು ವಿಠಲ ಮಲವಡ್ಕರ್ ಪೊಲೀಸ್ ಉಪ ನಿರೀಕ್ಷಕರು (ತನಿಖೆ )ಹಿರಿಯಡ್ಕ ಪೊಲೀಸ್ ಠಾಣೆ ಇವರು ದಿನಾಂಕ 02/01/2026 ರ ಮಧ್ಯಾಹ್ನ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಠಾಣಾ ಸಿಬ್ಬಂದಿಯವರೊಂದಿಗೆ ಅಂಜಾರು ಗ್ರಾಮದ ರಿಂಗ್ ರೋಡ್ ಬಳಿ ವಾಹನ ತಪಾಸಣೆ ನಡೆಸುತ್ತಿರುವಾಗ ಅಂಜಾರು ರಿಂಗ್ ರೋಡ್ ಕಡೆಯಿಂದ ಉಡುಪಿ ಹಿರಿಯಡ್ಕ ಮುಖ್ಯ ರಸ್ತೆಯ ಕಡೆಗೆ KA-18-D-242ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಶೇಖ್ ಮಹಮ್ಮದ್ ನದೀಮ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದು, ಸದ್ರಿ ಲಾರಿಯನ್ನು ತಪಾಸಣೆ ಮಾಡಿದಾಗ ಲಾರಿಯಲ್ಲಿ ಸುಮಾರು 3 ಯುನಿಟ್ ನಷ್ಟು ಮರಳು ತುಂಬಿದ್ದು ಅದರ ಅಂದಾಜು ಮೌಲ್ಯ ಸುಮಾರು 13000/- ರೂಪಾಯಿ ಆಗಿದ್ದು ಲಾರಿ ಚಾಲಕನು ಯಾವುದೇ ಪರವಾನಿಗೆ ಇಲ್ಲದೇ ಲಾಭಗಳಿಸುವ ಉದ್ದೇಶಗೋಸ್ಕರ ಚೇರ್ಕಾಡಿ ಕನ್ನಾರು ಪೆಟ್ರೋಲ್ ಬಂಕ್ ಹತ್ತಿರ ಸಂಗ್ರಹಿಸಿಟ್ಟಿದ್ದ ಮರಳನ್ನು ಕಳವು ಮಾಡಿ KA-18-D-242ನೇ ಟಿಪ್ಪರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 01/2026 U/S 303(2) BNS ACT 4(1-a) 21(4) MMRD Act 1957 US 66 R/W 192 (A) IMV Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಈ ಪ್ರಕರಣದ ಆರೋಪಿ ಶೇಖ್ ಮಹಮ್ಮದ್ ನದೀಮ್ ಪ್ರಾಯ 30 ವರ್ಷ ತಂದೆ: ಮೊಹಮ್ಮದ್ ರಫೀಕ್ ವಾಸ: ರೈಸ್ ಮಿಲ್ ಹತ್ತಿರ ತೆಳ್ಳಾರ್, ದುರ್ಗಾ ಗ್ರಾಮ ಕಾರ್ಕಳ ತಾಲೂಕು ಈತನನ್ನು ದಸ್ತಗಿರಿ ಮಾಡಿ, ಕ್ರತ್ಯಕ್ಕೆ ಬಳಸಿದ KA-18-D-242ನೇ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







