27 ಲಕ ಮೌಲ್ಯದ 452 ಗ್ರಾಂ ತೂಕದ ಚಿನ್ನಾಭರಣ ವತ
ಫಿರಾದುದಾರರ ತಮನು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗೃಹಲಕ್ಷ್ಮೀ ಲೇಔಟ್‌ನ ವಾಸಿಯಾಗಿದ್ದು, ದಿನಾಂಕ:10/06/2024 ರ ರಾತ್ರಿ ಮನೆಯ ಬೀಗವನ್ನು ಹಾಕಿಕೊಂಡು ಅಮೆರಿಕಾ ದೇಶದಲ್ಲಿರುವ ಮಗಳ ಮನೆಗೆ ಹೋಗಿರುತ್ತಾರೆ. ಏರಾದಿಯ ತಮನು ಅಮೆರಿಕಾಗೆ ಹೋಗಿ 2 ದಿನದ ನಂತರ ಬೆಂಗಳೂರಿನಲ್ಲಿರುವ ಅಣ್ಣನಿಗೆ ಕರೆ ಮಾಡಿ ಮನೆಯ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ ಮನೆಯ ಬಳಿ ಹೋಗಿ ನೋಡಿ ಎಂದು ತಿಳಿಸಿರುತ್ತಾರೆ. ಫಿರಾದಿದಾರರು
ತಮ್ಮ ತಮನ ಮನೆಯ ಬಳಿ ಹೋಗಿ ನೋಡಿದ್ದು ಯಾರೋ ಕಳ್ಳರು ಮನೆಯ ಹಿಂಬಾಗಿಲ ಬೀಗವನ್ನು ಹೊಡೆದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಖಚಿತ ಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ಈ ಕುರಿತು ಹಗಲು & ರಾತ್ರಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪಕರಣದಲ್ಲಿ ಪೊಲೀಸರು ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಿ, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಕೃತ್ಯವೆಸಗಿದ್ದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ಪ್ರಕರಣದಲ್ಲಿ ಕತ್ರವೆಸಗಿದ್ದ 3 ಜನ ಆರೋಪಿಗಳನ್ನು ದಿನಾಂಕ:04/07/2024 ರಂದು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಚ್.ಎಂ.ಟಿ ಲೇಔಟ್‌ನಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ನಂತರ ಈ ಮೂವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಅವರುಗಳು 3 ಕನ ಕಳವ ಪಕರಣಗಳಲ್ಲಿ ಭಾಗಿಯಾಗಿರುವ ಬಗೆ ಮಾಹಿತಿಯನ್ನು ನೀಡಿದ್ದು ಮತ್ತೋರ್ವನು ಸಹ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿರುತ್ತಾರೆ ಹಾಗೂ ಕಳುವು ಮಾಡಿರುವ ಚಿನ್ನಾಭರಣಗಳ ಪಶ್ಚಿಮ ಬಂಗಾಳದಲ್ಲಿ ವಿಲೇವಾರಿ ಮಾಡಿದ್ದೇವೆಂದು ತಿಳಿಸಿರುತ್ತಾರೆ.
ದಿನಾಂಕ:05/07/2024ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು. ತನಿಖೆಯನ್ನು ಮುಂದುವರೆಸಿ ಆರೋಪಿಗಳೊಂದಿಗೆ ಪಶ್ಚಿಮ ಬಂಗಾಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿತರು ಪಶ್ಚಿಮ ಬಂಗಾಳದಲ್ಲಿರುವ ದುಬುಲ್ಯ. ನಗರದ ಎರಡು ಜೂವೆಲರಿ ಅಂಗಡಿಯಲ್ಲಿ ಅಡವಿಟ್ಟಿದ್ದ ಒಟ್ಟು 452 ಗ್ರಾಂ ಚಿನ್ನವನ್ನು ವಶಪಡಿಸಿಕೊಳಲಾಯಿತು ಹಾಗೂ ಜೂವೆಲರಿ ಅಂಗಡಿಯ ಮಾಲೀಕರಿಬ್ಬರನ್ನು ಸಹ ರೀಸಿವ ಎಂದು ಪರಿಗಣಿಸಿ ವರಕೆ ಪಡೆಯಲಾಯಿ
ಈ ಪ್ರಕರಣದ ಆರೋಪಿಗಳ ಬಂಧನದಿಂದ ಪೀಣ ಪೊಲೀಸ್ ಠಾಣೆಯ-3 ಹಗಲು ಮತ್ತು ರಾತ್ರಿ ಕನ್ನ ಕಳವು ಪಕರಣಗಳು ಪತ್ತೆಯಾಗಿರುತ್ತವೆ. ಆರೋಪಿಗಳು ಈ ಹಿಂದೆ ರಾಮಮೂರ್ತಿನಗರ ಪೊಲೀಸ್ ಠಾಣೆಯ-2 ಪ್ರಕರಣಗಳು ಬಾಗಲಗುಂಟೆ ಪೊಲೀಸ್ ಠಾಣೆಯ ಪಕರಣ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಪಕರಣ, ಬಾಣಸವಾಡಿ ಪೊಲೀಸ್ ಠಾಣೆಯ-1 ಪಕರಣ, ಇಂದಿರಾನಗರ ಪೊಲೀಸ್ ಠಾಣೆಯ-1 ಪಕರಣ, ಕೊಡಿಗೇಹಳ್ಳಿ ಪೊಲೀಸ್ ಠಾಣೆಯ-1 ಪಕರಣ ಸೇರಿದಂತೆ ಒಟ್ಟು 9 ಹಗಲು ಮತ್ತು ರಾತ್ರಿ ಕನ್ನ ಕಳವು ಪ್ರಕರಣಗಳಲ್ಲಿ ದಸಗಿರಿಯಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ವಾಪಸು ಬಂದಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ.
ದಿನಾಂಕ:16/07/2024 ರಂದು ಆರು ಜನ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗ ಉಪ ಪೊಲೀಸ್ ಆಯುಕ್ತರಾದ ಶ್ರೀ.ಸೆ ದುಲು ಅಡಾವತ್, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಶ್ರೀ ಸದಾನಂದ ಎ ಶಿವಣ್ಣವರ್, ಸಹಾಯಕ ಪೊಲೀಸ್ ಆಯುಕ್ತರು ಪೀಣ, ಉಪ ವಿಭಾಗ ರವರ ನೇರ ತದಲಿ, ಪೀಣ, ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕರ್ ಶ್ರೀ. ಅನಿಲ್ ಕುಮಾರ್ ಎಂ.ಎಸ್. ಮತ್ತು ಅಧಿಕಾರಿ/ಸಿಬ್ಬಂದಿಯವರುಗಳು ಪಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.