ಕೋಟ: ಪಿರ್ಯಾದಿದಾರರಾದ ಜಸ್ಟಿನ್ ಅನಿಶ್ ಒಲಿವೆರಾ (31), ಐರೋಡಿ ಗ್ರಾಮ ಬ್ರಹ್ಮಾವರ ಇವರು ದಿನಾಂಕ 22/10/2025 ರಂದು 18:00 ಗಂಟೆಗೆ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಟೋಲ್ ಗೇಟ್ ಬಳಿ ಅಂಗಡಿಯಲ್ಲಿರುವಾಗ ಉಡುಪಿ – ಕುಂದಾಪುರ ಎನ್ ಎಚ್ 66 ರಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ KA-20-EF-9707 ನೇ ಸ್ಪೆಂಡರ್ ಮೋಟಾರ್ ಸೈಕಲ್ ನನ್ನು ಅಲ್ಪ್ರೆಡ್ ಬಾಂಜಿ ಎಂಬುವವರು ಟೋಲ್ ಗೇಟ್ ನ ಬಳಿ ಯು ಟರ್ನ್ ಮಾಡಿ ಕುಂದಾಪುರ – ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಬರಲು ರಸ್ತೆಯ ಪಶ್ಚಿಮ ಬದಿಯಲ್ಲಿರುವಾಗ ಉಡುಪಿ ಕಡೆಯಿಂದ KA-41-MF-3392 ನೇ ಟಾಟಾ ಕರ್ವ್ ಚಾಲಕ ನಾಗರಾಜ ಶೆಟ್ಟಿ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಪರಿಚಯದ ಅಲ್ಪ್ರೆಡ್ ಬಾಂಜಿ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಲ್ಪ್ರೆಡ್ ಬಾಂಜಿ ಇವರ ಕಾಲಿಗೆ ಮೂಳೆ ಮುರಿತದ ರಕ್ತಗಾಯವಾಗಿರುತ್ತದೆ ಇವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 192/2025 ಕಲಂ: 281, 125(b) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







