ಶಿರ್ವ: ಸೇಂಟ್ ಮೇರಿಸ್ ಕಾಲೇಜು ಶಿರ್ವದಲ್ಲಿ ಮಹಿಳಾ ವೇದಿಕೆ, ಲೈಂಗಿಕ ಕಿರುಕುಳ ವಿರೋಧಿ ಮತ್ತು ಲಿಂಗ ಸಂವೇದನಾಶೀಲತೆ ಘಟಕದ ಆಶ್ರಯದಲ್ಲಿ “ ಪೋಷ್, ಪಾಕ್ಕೊ ಕಾಯಿದೆ ಮತ್ತು ಸೈಬರ್ ಅಪರಾಧ ಕುರಿತು ಕಾನೂನು ಜಾಗ್ರತಿ ಕಾರ್ಯಕ್ರಮ” ಅಕ್ಟೋಬರ್ 16, 2025 ರಂದು ಕಾಲೇಜಿನ ಎ.ವಿ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ! ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಶ್ರೀ ಸುರೇಶ್ ಕುಮಾರ್ ಮತ್ತು ಹೆಚ್. ಸಿ. ಮಂಜುನಾಥ ಅಡಿಗ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪೋಷ್ ಮತ್ತು ಪೋಕೋ ಕಾಯಿದೆಗಳ ಕುರಿತು, ಹಾಗೂ ಇಂದಿನ ಯುಗದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಅವರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ, ಕಾನೂನಿನ ಸಹಾಯ ಪಡೆಯುವ ವಿಧಾನಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಸಿಂತಿಯಾ ನೀಮಾ ಡಿಸೋಜಾ ( ಸಂಯೋಜಕಿ) ಅವರ ನೇತ್ರತ್ವದಲ್ಲಿ ಶ್ರೀಮತಿ ಪೂರ್ಣಿಮಾ ಜಿ.ಎ.
( ಸಹ ಸಂಯೋಜಕಿ) ಮತ್ತು ಶ್ರೀ ಜಗದೀಶ್ ಆಚಾರ್ಯ ( ಐಕ್ಯಾಕ್ ಸಂಯೋಜಕ) ಅವರ ಸಹಕಾರದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ