ಶ್ರೀ ವಿಶ್ವಾವಸು ನಾಮ ಸಂವತ್ಸರದ ಆಶ್ವೀಜ ಬಹುಳ ಏಕಾದಶಿ ತಾ. 17-10-2025 ಶುಕ್ರವಾರ, ಬೆಳಿಗ್ಗೆ ಗಂಟೆ 8:00 ಕ್ಕೆ ಶಿರ್ವ ಶ್ರೀ ಕಾಶೀಮಠ, ಶ್ರೀ ಮಹಾಲಸಾ ದೇವಿಯ ಸನ್ನಿಧಿಯಲ್ಲಿ, ಶ್ರೀ ಕಾಶೀಮಠ ಸಂಸ್ಥಾನದ, ವಾರಣಾಸಿ ಮಠಾಧಿಪತಿ ಪೂಜ್ಯ ಶ್ರೀ ಶ್ರೀಮದ್ ಸಂಯಮೀoದ್ರ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಏಕಾಹ ಭಜನಾ ಮಂಗಲೋತ್ಸವವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಅವರ ದಿವ್ಯ ಉಪಸ್ಥಿತಿಯಲ್ಲಿ, ದೀಪ ಪ್ರಜ್ವಲನೆ, ಆಶೀರ್ವಚನ ಹಾಗೂ ಮಾರ್ಗದರ್ಶನದಲ್ಲಿ ಏಕದಿನ ಭಜನಾ ಮಂಗಲೋತ್ಸವ ಪ್ರಾರಂಭವಾಯಿತು.
ಈ ಮಹಾಸಂಕೀರ್ತನೆಯ ಸೇವಾ ಕೈಂಕರ್ಯದಲ್ಲಿ ಶಿರ್ವ ಹಾಗೂ ಆಸುಪಾಸಿನ ನೂರಾರು ಭಕ್ತರು ಮಹಾ ಸಂಭ್ರಮದಲ್ಲಿ ಭಾವೈಕ್ಯದಿಂದ ಎಲ್ಲರೂ ಭಾಗವಹಿಸಿ, ಶ್ರೀ ದೇವಿಯ ಹಾಗೂ ಶ್ರೀಹರಿ ಗುರುಗಳ ಕೃಪೆಗೆ ಪಾತ್ರರಾದರು. ಎಲ್ಲಾ ಭಕ್ತಾಧಿಗಳಿಗೆ ಮುಂಜಾನೆಯಿಂದ ಸಾಯಂಕಾಲದವರೆಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಿದ್ದರು. ರಾತ್ರಿ 9:00 ಕ್ಕೆ ಶ್ರೀ ದೇವಿಗೆ ವಿಶೇಷ ಪೂಜೆ ನಂತರ ವಿವಿಧ ಮಂಡಳಿಗಳಿಂದ ಭಜನೆ ಸೇವೆಯು ನಿರಂತರವಾಗಿ ನಡೆದಿರುತ್ತದೆ.
ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಶ್ರೀ ಜಿ. ಶ್ರೀನಿವಾಸ ಶೆಣೈ ( ಅಧ್ಯಕ್ಷರು), ಶ್ರೀ ಬಿ. ನರಸಿಂಹ ಭಟ್ ( ಕಾರ್ಯದರ್ಶಿ), ಶ್ರೀ ನಾಗರಾಜ ಪ್ರಭು, ಶ್ರೀ ವೆಂಕಟೇಶ್ ಪೈ, ಶ್ರೀ ರಾಜೇಶ್ ಪ್ರಭು, ಶ್ರೀ ರವಿ ಶೆಣೈ, ಶ್ರೀ ರಾಮಚಂದ್ರ ಶೆಣೈ, ಶ್ರೀ ರಮೇಶ್ ಪ್ರಭು, ಶ್ರೀ ಗಿರಿಧರ್ ಪ್ರಭು, ಶ್ರೀ ಅನಂತರಾಯ್ ಶೆಣೈ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಂಧುಗಳು ಹಾಗೂ ಹಿತೈಷಿಗಳು ಹಾಜರಿದ್ದರು.