ಫೆಬ್ರವರಿ 1 ಸಾಯಂಕಾಲ 4.30 ಕ್ಕೆ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಮೆರವಣಿಗೆಯ ವಿಜೃಂಭಣೆಯಿಂದ ನೆರವೇರಿತು ರೆ! ಫಾ.ಜೆಸನ್ ಲೋಬೊ (ಎಸ್ ಜೆ ) ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿ ಪರಮ ಪ್ರಸಾದದ ಬಗ್ಗೆ ಸಂದೇಶವನ್ನು ನೀಡಿದರು ಬಲಿ ಪೂಜೆಯ ನಂತರ ಪರಮ ಪ್ರಸಾದದ ಮೆರವಣಿಗೆಯು ಶಿರ್ವ ಆರೋಗ್ಯ ಮಾತೆ ದೇವಾಲಯದ ಮುಖ್ಯದ್ವಾರದಿಂದ ಹೊರಟು ಸಂತ ಮೇರಿ ಶಾಲೆಯ ದ್ವಾರದಿಂದ ಹೊರಬಂದು ಶಿರ್ವ ಪೇಟೆಯಲ್ಲಿ ಭಕ್ತರಿಂದ ಮೆರವಣಿಗೆ ನಡೆದು ಪೆಟ್ರೋಲ್ ಪಂಪಿನವರೆಗೆ ಮೆರವಣಿಗೆ ಹಾದು ಹೋಗಿ ಅಲ್ಲಿಂದ ತಿರುಗಿ ಸಾವುದ್ ಅಮ್ಮನವರ ಇಗರ್ಜಿ ಗೆ ತಲುಪಿ ಮೆರವಣಿಗೆ ಸಂಪನ್ನಗೊಂಡಿತು. ಮೆರವಣಿಗೆ ಉದ್ದಕ್ಕೂ ದೇವರ ಭಕ್ತಿ ಗೀತೆಗಳು ಮೊಳಗಿದವು ಮೆರವಣಿಗೆ ಮೆರಗನ್ನು ಹೆಚ್ಚಿಸಲು ಬ್ರಾಸ್ ಬ್ಯಾಂಡ್ ಹಾಗೂ ಯುವಕರ ತಂಡದಿಂದ ಛತ್ರಿಯ ಮೆರವಣಿಗೆ ಹಿಂದಿನ ವರ್ಷದಲ್ಲಿ ಪರಮ ಪ್ರಸಾದವನ್ನು ಸೇವಿಸಿದ ಮಕ್ಕಳಿಂದ ಹೂವು ಅರ್ಪಣೆ, ತೆರೆದ ವಾಹನದಲ್ಲಿ ಪರಮ ಪ್ರಸಾದವನ್ನು ಹಿಡಿದು ಪೇಟೆಯಲ್ಲಿ ಸಂಭ್ರಮದ ದಿಂದ ಮೆರವಣಿಗೆ ನಡೆಯಿತು.

ಪರಮ ಪ್ರಸಾದದ ಮೆರವಣಿಗೆಯಲ್ಲಿ ಶಿರ್ವ ಹಾಗೂ ಆಸುಪಾಸಿನ ಸರಿಸುಮಾರು 2,000 ಜನಕ್ಕೂ ಮಿಕ್ಕಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪರಮ ಪ್ರಸಾದದ ಮೆರವಣಿಗೆಯ ನಂತರ ಬಂದ ಎಲ್ಲಾ ಭಕ್ತಾದಿಗಳಿಗೆ ಪರಮ ಪ್ರಸಾದದ ಆಶೀರ್ವಾದವನ್ನು ನೀಡಿ ಬಂದ ಎಲ್ಲಾ ಭಕ್ತಾದಿಗಳಿಗೆ ಸಹ ಭೋಜನವನ್ನು ಏರ್ಪಡಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಾಯೋಜಕರಾದ ದಾನಿಗಳನ್ನು ಸನ್ಮಾನಿಸಲಾಯಿತು, ಭಕ್ತಾದಿಗಳಿಗೆ ಭೋಜನವನ್ನು ಏರ್ಪಡಿಸಿದ ದಾನಿಗಳಾದ ಗಾಡ್ವಿನ್ ಲವೀನಾ ಹಾಗೂ ಕ್ಲೋವಿ ಅರನ್ನ ಇವರಿಗೆ ಶಾಲು ಹೊಂದಿಸಿ ಸನ್ಮಾನಿಸಲಾಯಿತು. ಪರಮ ಪ್ರಸಾದದ ಮೆರವಣಿಗೆಯಲ್ಲಿ ಶಿರ್ವ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ರೆ. ಫಾ. ಡಾ. ಲೆಸ್ಲಿ ಕ್ಲಿಪ್ಪರ್ಡ್ ಡಿಸೋಜಾ, ಚರ್ಚಿನ ಸಹಾಯಕ ಧರ್ಮಗುರುಗಳಾದ ಫಾ. ರಾಲ್ವಿನ್ ಅರನ್ನ, ಫಾ. ರೋಷನ್ ಡಿಸೋಜಾ,ಫಾ. ಅನಿಲ್ ರೊಡ್ರಿಗಸ್ , ಫಾ. ವಿನ್ಸೆಂಟ್ ಲೋಬೋ(ಕಲ್ಕತ್ತಾ), ಫಾ. ಕಿರಣ್ ನಜರೆತ್, (SDB ) ಫಾ. ಅಲ್ವಿನ್ ಬೋಳ (SDB ), ಫಾ. ರೂವೆಲ್ ಫರ್ನಾಂಡಿಸ್(SDB ) ಉಪಸ್ಥಿತರಿದ್ದರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜುಲಿಯನ್ ರೊಡ್ರಿಗಸ್, ಕಾರ್ಯದರ್ಶಿಯಾದ ಗಿಲ್ಬರ್ಟ್ ಪಿಂಟೋ ,ಆಯೋಗದ ಸಂಚಾಲಕಿಯಾದ ಶಾಲಿನಿ ಕೊರ್ಡ, ಆರ್ಥಿಕ ಸಮಿತಿಯ ಸದಸ್ಯರು ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ.

ಫೆಬ್ರವರಿ 1 ಸಾಯಂಕಾಲ 4.30 ಕ್ಕೆ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಮೆರವಣಿಗೆಯ ವಿಜೃಂಭಣೆಯಿಂದ ನೆರವೇರಿತು ರೆ! ಫಾ.ಜೆಸನ್ ಲೋಬೊ (ಎಸ್ ಜೆ ) ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿ ಪರಮ ಪ್ರಸಾದದ ಬಗ್ಗೆ ಸಂದೇಶವನ್ನು ನೀಡಿದರು ಬಲಿ ಪೂಜೆಯ ನಂತರ ಪರಮ ಪ್ರಸಾದದ ಮೆರವಣಿಗೆಯು ಶಿರ್ವ ಆರೋಗ್ಯ ಮಾತೆ ದೇವಾಲಯದ ಮುಖ್ಯದ್ವಾರದಿಂದ ಹೊರಟು ಸಂತ ಮೇರಿ ಶಾಲೆಯ ದ್ವಾರದಿಂದ ಹೊರಬಂದು ಶಿರ್ವ ಪೇಟೆಯಲ್ಲಿ ಭಕ್ತರಿಂದ ಮೆರವಣಿಗೆ ನಡೆದು ಪೆಟ್ರೋಲ್ ಪಂಪಿನವರೆಗೆ ಮೆರವಣಿಗೆ ಹಾದು ಹೋಗಿ ಅಲ್ಲಿಂದ ತಿರುಗಿ ಸಾವುದ್ ಅಮ್ಮನವರ ಇಗರ್ಜಿ ಗೆ ತಲುಪಿ ಮೆರವಣಿಗೆ ಸಂಪನ್ನಗೊಂಡಿತು. ಮೆರವಣಿಗೆ ಉದ್ದಕ್ಕೂ ದೇವರ ಭಕ್ತಿ ಗೀತೆಗಳು ಮೊಳಗಿದವು ಮೆರವಣಿಗೆ ಮೆರಗನ್ನು ಹೆಚ್ಚಿಸಲು ಬ್ರಾಸ್ ಬ್ಯಾಂಡ್ ಹಾಗೂ ಯುವಕರ ತಂಡದಿಂದ ಛತ್ರಿಯ ಮೆರವಣಿಗೆ ಹಿಂದಿನ ವರ್ಷದಲ್ಲಿ ಪರಮ ಪ್ರಸಾದವನ್ನು ಸೇವಿಸಿದ ಮಕ್ಕಳಿಂದ ಹೂವು ಅರ್ಪಣೆ, ತೆರೆದ ವಾಹನದಲ್ಲಿ ಪರಮ ಪ್ರಸಾದವನ್ನು ಹಿಡಿದು ಪೇಟೆಯಲ್ಲಿ ಸಂಭ್ರಮದ ದಿಂದ ಮೆರವಣಿಗೆ ನಡೆಯಿತು.
ಪರಮ ಪ್ರಸಾದದ ಮೆರವಣಿಗೆಯಲ್ಲಿ ಶಿರ್ವ ಹಾಗೂ ಆಸುಪಾಸಿನ ಸರಿಸುಮಾರು 2,000 ಜನಕ್ಕೂ ಮಿಕ್ಕಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪರಮ ಪ್ರಸಾದದ ಮೆರವಣಿಗೆಯ ನಂತರ ಬಂದ ಎಲ್ಲಾ ಭಕ್ತಾದಿಗಳಿಗೆ ಪರಮ ಪ್ರಸಾದದ ಆಶೀರ್ವಾದವನ್ನು ನೀಡಿ ಬಂದ ಎಲ್ಲಾ ಭಕ್ತಾದಿಗಳಿಗೆ ಸಹ ಭೋಜನವನ್ನು ಏರ್ಪಡಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಾಯೋಜಕರಾದ ದಾನಿಗಳನ್ನು ಸನ್ಮಾನಿಸಲಾಯಿತು, ಭಕ್ತಾದಿಗಳಿಗೆ ಭೋಜನವನ್ನು ಏರ್ಪಡಿಸಿದ ದಾನಿಗಳಾದ ಗಾಡ್ವಿನ್ ಲವೀನಾ ಹಾಗೂ ಕ್ಲೋವಿ ಅರನ್ನ ಇವರಿಗೆ ಶಾಲು ಹೊಂದಿಸಿ ಸನ್ಮಾನಿಸಲಾಯಿತು. ಪರಮ ಪ್ರಸಾದದ ಮೆರವಣಿಗೆಯಲ್ಲಿ ಶಿರ್ವ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ರೆ. ಫಾ. ಡಾ. ಲೆಸ್ಲಿ ಕ್ಲಿಪ್ಪರ್ಡ್ ಡಿಸೋಜಾ, ಚರ್ಚಿನ ಸಹಾಯಕ ಧರ್ಮಗುರುಗಳಾದ ಫಾ. ರಾಲ್ವಿನ್ ಅರನ್ನ, ಫಾ. ರೋಷನ್ ಡಿಸೋಜಾ,ಫಾ. ಅನಿಲ್ ರೊಡ್ರಿಗಸ್ , ಫಾ. ವಿನ್ಸೆಂಟ್ ಲೋಬೋ(ಕಲ್ಕತ್ತಾ), ಫಾ. ಕಿರಣ್ ನಜರೆತ್, (SDB ) ಫಾ. ಅಲ್ವಿನ್ ಬೋಳ (SDB ), ಫಾ. ರೂವೆಲ್ ಫರ್ನಾಂಡಿಸ್(SDB ) ಉಪಸ್ಥಿತರಿದ್ದರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜುಲಿಯನ್ ರೊಡ್ರಿಗಸ್, ಕಾರ್ಯದರ್ಶಿಯಾದ ಗಿಲ್ಬರ್ಟ್ ಪಿಂಟೋ ,ಆಯೋಗದ ಸಂಚಾಲಕಿಯಾದ ಶಾಲಿನಿ ಕೊರ್ಡ, ಆರ್ಥಿಕ ಸಮಿತಿಯ ಸದಸ್ಯರು ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಶಿರ್ವ ಪೊಲೀಸ್ ಠಾಣಾಧಿಕಾರಿ ಹಾಗೂ ಠಾಣಾ ಸಿಬ್ಬಂದಿಗಳು ಪೇಟೆಯ ರಸ್ತೆಯಲ್ಲಿ ಮೆರವಣಿಗೆಯ ಬಂದೋಬಸ್ತ್ ಹಾಗೂ ವಾಹನ ಸಂಚಾರವನ್ನು ಅಚ್ಚುಕಟ್ಟಾಗಿ ಮಾಡುವಲ್ಲಿ ಸಹಕರಿಸಿದ್ದಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ