ದಿನಾಂಕ:06.03.2026 ರಂದು ಸಂಜೆ 08:10 ಗಂಟೆಗೆ ಶಿರ್ವ ಪೊಲೀಸ್ ಠಾಣೆಗೆ ಮಾದಕ ವಸ್ತುವನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡು ಕಾಪು ತಾಲೂಕು ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲೋನಿ ಎಂಬಲ್ಲಿಗೆ ಬರುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಉಪ ನಿರೀಕ್ಷಕರು ಠಾಣಾ ಸಿಬ್ಬಂದಿಯವರೊಂದಿಗೆ ಚಂದ್ರನಗರ ಜನತಾ ಕಾಲೋನಿ ಬಳಿಗೆ ತಲುಪಿದಾಗ ಕಾಪು – ಶಿರ್ವ ಸಾರ್ವಜನಿಕ ರಸ್ತೆಯ ಬದಿ ನಿಂತಿದ್ದ ಕಾರನ್ನು ಪರಿಶೀಲನೆ ಮಾಡಿ ಕಾರಿನ ಒಳಗಡೆ ಇದ್ದ ಝಹೀರ್ ಅಹ್ಮದ್, ಪ್ರಾಯ: 66 ವರ್ಷ, ತಂದೆ: ಮೊಹಿದ್ದೀನ್ ಸಾಬ್, ವಾಸ: ಮನೆನಂಬ್ರ: #1-122, ಮಹಡಿ ಘರ್, ದರ್ಗಾ ಹತ್ತಿರ, ಬೆಳಪು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಮತ್ತು ಸಯ್ಯದ್ ಶಮೀಮ್, ಪ್ರಾಯ: 28 ವರ್ಷ, ತಂದೆ: ಹನೀಫ್, ವಾಸ: ಮನೆನಂಬ್ರ: 1-76 ಮುಬೀನ್ ಮಂಜಿಲ್, ಸ್ಟಡಿ ಸರ್ಕಲ್, ಬೆಳಪು ಗ್ರಾಮ, ಕಾಪು ತಾಲೂಕು ಮತ್ತು ಉಡುಪಿ ಜಿಲ್ಲೆ ಎಂಬುವರನ್ನು ವಶಕ್ಕೆ ಪಡೆದು 2.83 ಗ್ರಾಂ ತೂಕದ MDMA ಮಾದಕ ವಸ್ತು, ಮೊಬೈಲ್ ಪೋನ್ ಮತ್ತು ಕಾರನ್ನು ವಶಪಡಿಸಿಕೊಂಡಿರುವುದಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಹರಿರಾಂ ಶಂಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ಸುಧಾಕರ ಎಸ್ ನಾಯ್ಕ್ ರವರ ನಿರ್ದೇಶನದಂತೆ, ಕಾರ್ಕಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ವಿಜಯ್ ಪ್ರಸಾದ್ ಮತ್ತು ಕಾಪು ವೃತ್ತ ನಿರೀಕ್ಷಕರಾದ ಅಝಮತ್ ಆಲಿರವರ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸ್ ಠಾಣಾ ಪಿಎಸ್ ಐ ಮಂಜುನಾಥ ಮರಬದ, ಪಿಎಸ್‌ಐ ಲೋಹಿತ್ ಕುಮಾರ್, ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ, ಹೆಡ್ ಕಾನ್ಸ್ಟೇಬಲ್ ಪ್ರಕಾಶ್ ಸುವರ್ಣ, ಕಾನ್ಸ್ಟೇಬಲ್ ಅನ್ವರ್ , ಯಲ್ಲಾಲಿಂಗ ಹಾಗೂ ಠಾಣಾ ಸಿಬ್ಬಂದಿಗಳು ಹಾಗೂ ಅಪರಾಧ ಪರಿಶೀಲನಾಧಿಕಾರಿಗಳು ಉಡುಪಿ ರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







