ಉಡುಪಿ ಕಾಪು ತಾಲೂಕಿನ ಶಿರ್ವ ಪೋಲಿಸ್ ಠಾಣೆಯಲ್ಲಿ ತಾ! 01-10-2025 ರಂದು ವಿಜೃಂಭಣೆಯಿಂದ ಆಯುಧಪೂಜೆ ನಡೆಯಿತು. ಶಿರ್ವ ಠಾಣಾಧಿಕಾರಿಯಾಗಿರುವ ಶ್ರೀ ಮಂಜುನಾಥ ಮರಬದ, ಶ್ರೀ ಲೋಹಿತ್ ಕುಮಾರ್ ಇವರ ನೇತ್ರತ್ವದಲ್ಲಿ ಎಲ್ಲಾ ಸಿಬ್ಬಂದಿಗಳು ಪೂಜೆಯಲ್ಲಿ ಭಾಗವಹಿಸಿದರು. ಶಿರ್ವ ಠಾಣಾ ವ್ಯಾಪ್ತಿಯಲ್ಲಿರುವ 4 ಎಎಸ್‌ಐ, 10 ಹೆಡ್ ಕಾನ್ಸ್ಟೇಬಲ್ , 20 ಪೋಲಿಸ್ ಕಾನ್ಸ್ಟೇಬಲ್ ಗಳು ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ತೊಟ್ಟು ಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಗಳ ಕುಟುಂಬ ಸದಸ್ಯರು ಠಾಣೆಯಲ್ಲಿ ಜರಗಿದ ಪೂಜೆ ವಿಧಿ ವಿಧಾನಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕರಾದ ಶ್ರೀ ವಿನಯ್ ಕುಮಾರ್ ಸೊರಕೆ, ರೆ. ಫಾ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ, ಆರೋಗ್ಯ ಮಾತಾ ದೇವಾಲಯ ಶಿರ್ವ, ರೆ.ಫಾ. ಜೋರ್ಜ್ ಡಿಸೋಜ, ಸಂತ ಲಾರೆನ್ಸ್ ಚರ್ಚ್, ಮೂಡುಬೆಳ್ಳಿ, ಶಿರ್ವ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಝುಬೈರ್ ಸಾಹೇಬ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ, ಕುತ್ಯಾರು, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೆಲ್ವಿನ್ ಡಿಸೋಜ, ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾದ ಶ್ರೀಮತಿ ಅನಿತಾ ಡಿಸೋಜ, ಪೋಲಿಸ್ ನ್ಯೂಸ್ ಇದರ ಉಡುಪಿ ವರದಿಗಾರರಾದ ಶ್ರೀ ವಿಲ್ಸನ್ ಡಿಸೋಜ ಹಾಗೂ ಶಿರ್ವ ಪರಿಸರದ ಗಣ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಗಣ್ಯರಿಗೆಲ್ಲಾ ಠಾಣಾಧಿಕಾರಿಯವರು ದೇವರ ಪ್ರಸಾದ ನೀಡಿ ಶುಭ ಹಾರೈಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ