ದಿನಾಂಕ 21.02.2026 ರಂದು ಬೆಳ್ಳಿಗ್ಗೆ ಸುಮಾರು 09:30 ಗಂಟೆಗೆ ಪಿರ್ಯಾದಿ ಹೆಲೆನ್ ಡಿಸೋಜ (69) ಗಂಡ: ದಿʼ ಎಡ್ವಿನ್ ಡಿಜೋಜ, ಶಂಕರಪುರ ಕುರ್ಕಾಲು ಗ್ರಾಮ ,ಕಾಪು ಇವರು ತನ್ನ ಮನೆಯ ಹಿಂಬದಿಯಲ್ಲಿ ಗೀತಾರವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ಸಮಯ ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದು, ಮಾತನಾಡುತ್ತಾ ಚಹ ಕುಡಿದು ನಂತರ ಅರ್ಜಿದಾರರು ರೂಮ್ ಇಲ್ಲವೆಂದು ಹೇಳಿದ್ದು, ನಂತರ ಪಿರ್ಯಾದಿದಾರರ ಪಕ್ಕದ ಮನೆಯಲ್ಲಿರುವ ಅಕ್ಕ ತೆರಜಾರವರ ಮನೆ ಕಡೆಗೆ ಹೋದರು ನಂತರ ಸುಮಾರು 9:45 ಗಂಟೆಗೆ ಅವರ ಪೈಕಿ ಒಬ್ಬನು ವಾಪಾಸ್ಸು ಪಿರ್ಯಾದಿದಾರರ ಬಳಿಗೆ ಬಂದಿದ್ದು ವಿಚಾರಿಸಿದಾಗ ಮೊಬೈಲ್ ನಂಬರ್ ಕೊಡಿ ಬಾಡಿ ರೂಮ್ ಬೇಕಾದರೆ ಕರೆ ಮಾಡುತ್ತೇನೆ, ಎಂದು ಹೇಳಿದ್ದು ಪಿರ್ಯಾದಿದಾರರು ಮೊಬೈಲ್ ನಂಬ್ರ ನ್ನು ಹೇಳುತ್ತಿರುವಾಗ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 28 ಗ್ರಾಂ ತೋಕದ ಚಿನ್ನದ ಸರವನ್ನು ಎಳೆದು ಕೊಂಡು ಹೋಗುವಾಗ ತಡೆಯಲು ಬಂದ ಪಿರ್ಯಾದುದಾರರ ಅಕ್ಕ ತೆರಜ ಎಂಬವರನ್ನು ದೂಡಿ ಹಾಕಿ ಮೂರೂ ಜನರು ಬೈಕ್ ನಲ್ಲಿ ಹೋಗಿರುವುದಾಗಿದೆ. ಚಿನ್ನದ ಸರದ ಅಂದಾಜು ಮೌಲ್ಯ 3,50,000/- ಆಗಿದ್ದು, ಈ ಬಗ್ಗೆ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆ
ಅಪರಾಧ ಕ್ರಮಾಂಕ : 20/2026 ಕಲಂ:
309 (4) ಜೊತೆಗೆ 3(5) ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ಪತ್ತೆಯ ಬಗ್ಗೆ ಕೂಡಲೇ ಕಾರ್ಯ ಪ್ರವರ್ತರಾದ ಶಿರ್ವ ಠಾಣೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಿ, ಕೂಡಲೇ ಅಲ್ಲಿಯ ಸಮೀಪದಲ್ಲಿ ಲಭ್ಯವಿರುವ ಸಿಸಿಟಿವಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಪಲ್ಸರ್ ಬೈಕ್ ನಲ್ಲಿ ಮೂರು ಜನ ಆರೋಪಿಗಳು ಬಂದು ಕೃತ್ಯ ವ್ಯಸಗಿರುವುದು ತಿಳಿದು ಬಂದಿರುತ್ತದೆ. ಕೂಡಲೇ ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ತಿಳಿಸಿ, ಸಿಸಿಟಿವಿ footage ಗಳನ್ನ ಕಳಿಸಿರುತ್ತಾರೆ. ಅದರಂತೆ ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ನಾಕಾಬಂದಿ ನಡೆಸಿ ಆರೋಪಿಗಳನ್ನು ಕೃತ್ಯ ನಡೆದ ಕೇವಲ ಮೂರರಿಂದ ನಾಲ್ಕು ಗಂಟೆ ಒಳಗಾಗಿ ಶಿರೂರ ಚೆಕ್ ಪೋಸ್ಟ್ ನಲ್ಲಿ ಬೈಂದೂರು ಪೊಲೀಸರು ತಡೆದು ನಿಲ್ಲಿಸಿ, ಶಿರ್ವ ಪೊಲೀಸರ ವಶಕ್ಕೆ ನೀಡಿರುತ್ತಾರೆ.
ಶಿರ್ವ ಪೊಲೀಸರು ಸದರಿ ಆರೋಪಿತರಿಂದ ಒಂದು ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿರುತ್ತಾರೆ
ಸದರಿ ಪತ್ತೆ ಕಾರ್ಯದಲ್ಲಿ ಸಿಪಿಐ ಕಾಪು ಅಜ್ಮತ್ ಅಲಿ ನೇತೃತ್ವದ ತಂಡ- ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಪಿಎಸ್ಐ ಸುನಿಲ್ ಕುಮಾರ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ್ ಅಲಿ, ಹರೀಶ, ಯಲಾಲ್ಲಿಂಗ ಸುರೇಶ, ಪ್ರಕಾಶ್ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.
ಫೆಬ್ರವರಿ 3 ರಂದು ಹಿಟ್ ಅಂಡ್ ರನ್ ಮಾಡಿದ ಟಿಪ್ಪರನ್ನು 30 ನಿಮಿಷಗಳಲ್ಲಿ ಪಚ್ಚೆ ಪತ್ತೆ ಹಚ್ಚಿ ಹಾಗೂ ಸರಕಳ್ಳತನದ ಆರೋಪಿಗಳನ್ನು 3 ತಾಸಿನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಶಿರ್ವ ಪೊಲೀಸರನ್ನು ಶಿರ್ವ ಠಾಣಾ ವ್ಯಾಪ್ತಿಯ ಜನರು ಪ್ರಶಂಶಿಸಿದ್ದಾರೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







