20.09.2025 ರ ಸಂಜೆ 7 ಗಂಟೆಗೆ ಶಿರ್ವ ಶಾಂತಿಗುಡ್ಡೆಯಿಂದ ದಾಂಡಲಿಗೆ ಮರದ ದಿಂಬಿಗಳನ್ನು ಹೊತ್ತು ಹೊರಟಿದ್ದ ಲಾರಿಯ ಚಾಲಕ ವಿದ್ಯಾಸಾಗರ್ ರವರ ಅಜಾಗರು ಕತೆಯಿಂದ ಶಿರ್ವ ನ್ಯಾರ್ಮ ಶ್ರೀ ಮಹಾಲಸ ದೇವಸ್ಥಾನದ ದ್ವಾರದ ಬಳಿ ಮೆಸ್ಕಾಂ ತಂತಿಗೆ ಸಿಲುಕಿಕೊಂಡು ತಂತಿಗಳು ತುಂಡಾಗಿ ಹಲವು ಕಂಬಗಳಿಗೆ ಹಾನಿಯಾಗಿದೆ. ಇದರಿಂದ 3.30 ತಾಸು ವಿದ್ಯುತ್ ವ್ಯತವಾಗಿರುತ್ತದೆ. ಇದಕ್ಕೆ ಹೆಚ್ಚುವರಿ ಮರದ ದಿಮ್ಮಿಗಳನ್ನು ತುಂಬಿರುವುದು ಕಾರಣ ಎಂದು ಸಾರ್ವಜನಿಕರು ತಿಳಿಸಿರುತ್ತಾರೆ. ಇದನ್ನು ತಿಳಿದ ಸಾರ್ವಜನಿಕರು ಲಾರಿಯನ್ನು ತಡೆದು ನಿಲ್ಲಿಸಿ ವಿದ್ಯುತ್ ಸಂಪರ್ಕವನ್ನು ಸರಿಪಡಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಶಿರ್ವ ಪೊಲೀಸ್ ಸಿಬ್ಬಂದಿ ತಕ್ಷಣ ಆಗಮಿಸಿದ್ದು ವಾಹನ ಸಂಚಾರವನ್ನು ಸುಗಮಗೊಳಿಸಲು ಸಹಕರಿಸಿದರು. ಸ್ಥಳಕ್ಕೆ ಮೆಸ್ಕಾಂ S.O ಶ್ರೀ ಮಂಜಪ್ಪ ರವರನ್ನು ಕರೆಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಹಕರಿಸುವಂತೆ ಮನವಿ ಮಾಡಿದರು. ಇದು ಮೊದಲನೆಯದಲ್ಲ ಇಂತಹ ಲಾರಿಗಳಿಂದ ಮೆಸ್ಕಂಗೆ ರಾತ್ರಿ ಹೊತ್ತು ತುಂಬಾ ಸಲ ವಿದ್ಯುತ್ ಸಮಸ್ಯೆ ಆಗಿರುತ್ತದೆ. ಈ ವೆಚ್ಚವನ್ನು ಲಾರಿ ಚಾಲಕ ಹಾಗೂ ದಿಂಬಿಗಳನ್ನು ಸಾಗಿಸುವ ಗುತ್ತಿಗೆದಾರರೇ ಹೊಣೆ ಎಂದರು. ತಕ್ಷಣ ಶಿರ್ವ ಠಾಣಾಧಿಕಾರಿಯಾಗಿರುವ ಶ್ರೀ ಮಂಜುನಾಥ ಬರಬದ , ಕ್ರೈಂ ಠಾಣಾಧಿಕಾರಿ ಶ್ರೀ ಲೋಹಿತ್ ಕುಮಾರ್ ಸ್ಥಳಕ್ಕಾಗಮಿಸಿ ದಿಂಬಿಗಳನ್ನು ಸಾಗಟ ಮಾಡುವ ಗುತ್ತಿಗೆದಾರರಾಗಿರುವ ಶ್ರೀ ಗಿರುರವರನ್ನು ಸ್ಥಳಕ್ಕೆ ಕರೆಯಿಸಿ ಎಲ್ಲ ವೆಚ್ಚವನ್ನು ಬರಿಸುವಂತೆ ಸೂಚಿಸಿದರು. ಮುಂದೆ ಇಂತಹ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು. ಇದಕ್ಕೆ ತಪ್ಪಿದಲ್ಲಿ ಪ್ರಕರಣವನ್ನು ದಾಖಲಿಸುವಂತೆ ಎಚ್ಚರಿಕೆ ನೀಡಿದರು.
S.O ಶ್ರೀ ಮಂಜಪ್ಪ, ಸಿಬ್ಬಂದಿಗಳಾದ ಶ್ರೀ ಕಿರಣ್ , ಶ್ರೀ ಸಂತೋಷ್ ರವರು ಸಾರ್ವಜನಿಕರ ಸಹಕಾರದೊಂದಿಗೆ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಸುಮಾರು 10:30 ಗಂಟೆಗೆ ವಿದ್ಯುತ್ ಪೂರೈಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಶ್ರೀ ಕರಿಯಣ್ಣ, ಶ್ರೀ ಪ್ರೇಮನಾಥ್ ಶೆಟ್ಟಿ, ಶ್ರೀ ಗಿರಿಧರ್ ಪ್ರಭು, ಶ್ರೀ ಕೆವಿನ್, ಶ್ರೀ ಅರುಣ್, ಶ್ರೀ ಅಹಾದ್ ಶಿರ್ವ ಹಾಗೂ ಇತರರು ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಸಹಕರಿಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ