ಶಿರ್ವ: ಬಸವರಾಜ ಯಲಿಶಿರೂರ(32) ಲಕ್ಷ್ಮೀನಗರ, ಗರಡಿ ರಸ್ತೆ, 5 ನೇ ಕ್ರಾಸು, ಪುತ್ತೂರು, ಇವರ ತಮ್ಮ ಮಹೇಶ@ಮಯೂರ ನಾಗಪ್ಪ ಯಲಿಶಿರೂರ(30)ರವರು ದಿನಾಂಕ: 20.01.2026 ರಂದು KA19HB1993 ನೇ ನೊಂದಣಿ ಸಂಖ್ಯೆಯ ACTIVA ಸ್ಕೂಟರನ್ನು ಬೆಳ್ಮಣ್ಣಿನಿಂದ ಶಿರ್ವ ಕಡೆಗೆ ಸವಾರಿ ಮಾಡಿಕೊಂಡು ಬೆಳ್ಮಣ್ಣು-ಶಿರ್ವ ಸಾರ್ವಜನಿಕ ರಸ್ತೆಯ ಪಿಲಾರುಖಾನ ಗುಂಡುಪಾದೆ ಬಳಿ ಸಮಯ ಸುಮಾರು ಸಂಜೆ 7:20 ಗಂಟೆಗೆ ತಲುಪುವಾಗ ಶಿರ್ವ ಕಡೆಯಿಂದ ಬೆಳ್ಮಣ್ಣು ಕಡೆಗೆ KA19B 9262 ನೇ ನೊಂದಣಿ ಸಂಖ್ಯೆಯ ಲಾರಿಯನ್ನು ಚಾಲಕ ಸತೀಶರವರು ಅಜಾಗರೂಕತೆ ಚಲಾಯಿಸಿಕೊಂಡು ಬಂದು ಮಹೇಶರವರು ಸಾರ್ವಜನಿಕ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು ಈ ಅಪಘಾತದಿಂದ ಮಹೇಶರವರ ಬಲಕಾಲಿಗೆ ಒಳ ಜಖಂ ಆಗಿದ್ದಲ್ಲದೆ ತಲೆಗೆ ರಕ್ತವಾಗಿದ್ದು ಕೈ ಮತ್ತು ಕಾಲುಗಳಿಗೆ ತರಚಿದ ಗಾಯವಾಗಿದ್ದಲ್ಲದೆ ಕಿವಿಯಲ್ಲಿ ರಕ್ತ ಹೊರ ಬಂದಿರುತ್ತದೆ. ತಕ್ಷಣ ಸಾರ್ವಜನಿಕರು ಶಿರ್ವ ಪೊಲೀಸರಿಗೆ ಕರೆ ಮಾಡಿದ್ದು ಪಿಎಸ್ಐ ಮಂಜುನಾಥ ಮರಬದ ಹಾಗೂ ಠಾಣಾ ಸಿಬ್ಬಂದಿಯವರು ಸಾರ್ವಜನಿಕರ ಸಹಕಾರದಿಂದ ಮಹೇಶರವರನ್ನು ಚಿಕಿತ್ಸೆಯ ಬಗ್ಗೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೈದ್ಯರ ಸಲಹೆಯಂತೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 11/2026 ಕಲಂ: 281, 125(a) BNS 2023. ರಂತೆ ಪ್ರಕರಣ ದಾಖಲಿಸಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







