ಉಡುಪಿ: ಶಿರ್ವ ಡಿಸೆಂಬರ್ 7 ಜಾಯೊ ಗ್ರೀನ್ಸ್ ನಲ್ಲಿ ಉಮ್ರಾರ್ ಸಂಸ್ಥೆಯಿಂದ ಸಂಭ್ರಮದ ಕ್ರಿಸ್ಮಸ್ ಮಾರ್ಕೆಟ್ ನಡೆಯಿತು, ಶಿರ್ವ ಹಾಗೂ ಉಡುಪಿ ಜಿಲ್ಲೆಯ ಸಾವಿರಾರು ಜನರು ಕ್ರಿಸ್ಮಸ್ ಮಾರ್ಕೆಟ್ ನ ಆನಂದವನ್ನು ಸವಿದರು, ಶಿರ್ವ ಪರಿಸರದ ಯುವ ಜನರ ಸಂಗೀತ ತಂಡ ಎಕೊಸ್ಟಿಕ್ ಕ್ರಿಸ್ಮಸ್ ಕ್ಯಾರಲ್ ಹಾಗೂ ಸಂಗೀತ ರಸಮಂಜರಿಯನ್ನು ನೀಡಿದರು ಶಿರ್ವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಮರಬದ ದೀಪ ಬೆಳಗಿಸಿ ಉದ್ಘಾಟಿಸಿದರು ಮಾರುತಿ ಸುಜುಕಿ ವಿಕ್ಟೋರಿಯಾಸ್ ಹೊಸ ಕಾರನ್ನು ಈ ಸಂದರ್ಭದಲ್ಲಿ ಅನಾರೋಹಣ ಗೊಳಿಸಿ ಲೋಕಾರ್ಪಣೆ ಮಾಡಲಾಯಿತು ಊರ ಜನರನ್ನು ಕ್ರಿಸ್ಮಸ್ ಮಾರ್ಕೆಟ್ ಮುಖಾಂತರ ಉಗ್ಗುಡಿಸುವ ಕಾರ್ಯಕ್ರಮವನ್ನು ಮಾಡಿದ ಉಮ್ರಾರ್ ತಂಡಕ್ಕೆ ಮಂಜುನಾಥ ಮರಬದ ಅಭಿನಂದಿಸಿದರು, ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅಡಿಗ ಹಾಜರಿದ್ದರು ಆರೋಗ್ಯಮಾತ ದೇವಾಲಯದ ಪ್ರಧಾನ ಧರ್ಮಗಳಾದ ರೆ. ಡಾ. ಲೆಸ್ಲಿ ಡಿಸೋಜ ಕ್ರಿಸ್ಮಸ್ ಹಬ್ಬದ ಸಂದೇಶವನ್ನು ನೀಡಿದರು, ಸಹಾಯಕ ಧರ್ಮ ಗುರುಗಳಾದ ಫಾ. ಅನಿಲ್ ರೊಡ್ರಿಗಸ್ ಫಾ. ರೋಶನ್ ಡಿಸೋಜ ಹಾಜರಿದ್ದರು. 28 ಕ್ರಿಸ್ಮಸ್ ಸ್ಟಾಲ್, 10 ಊಟೋಪಚಾರದ ಕೌಂಟರ್ , ಲಕ್ಕಿ ಡ್ರಾ, ಫ್ರೀ ಫೇಸ್ ಪೇಂಟ್, ಫ್ರೀ ಕೂಪನ್ ಡ್ರಾ, ಫ್ರೀ ಪಾರ್ಕಿಂಗ್, ಫ್ರೀ ಎಂಟ್ರಿ ಹಾಗೂ ಇನ್ನಿತರ ಮನರಂಜನೆಗಳ ಸಂಭ್ರಮವಿತ್ತು.
ಉಮ್ರಾರ್ ತಂಡವು ಸಪ್ಟಂಬರ್ 25ರಂದು ಹುಟ್ಟಿಕೊಂಡಿದ್ದು ಸಹೃದಯಿ ಬಂಧುಗಳಾದ 8 ಜನರನ್ನು ಒಳಗೊಂಡ ತಂಡ ದ ಇದು ಮೂರನೆಯ ಪ್ರಸ್ತುತಿ ಕ್ರಿಸ್ಮಸ್ ಮಾರ್ಕೆಟ್ ಗೆ ಸಹಕರಿಸಿದ ಎಲ್ಲಾ ಶಿರ್ವ ಪರಿಸರದ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಜನತೆಗೆ ಅಭಿನಂದನೆಗಳು. ಎಲ್ವನ್ ಕ್ಯಾಸ್ಟಲಿನೊ ಕಾರ್ಯಕ್ರಮದ ಸಂಯೋಜನೆಯನ್ನು ಮಾಡಿದರು, ನೀಲ್ ಕ್ವಾಡ್ರಾಸ್ ಕಾರ್ಯಕ್ರಮವನ್ನು ನಿರೂಪಿಸಿದರು
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






