ಉಡುಪಿ, ಶಿರ್ವ : ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯ ವತಿಯಿಂದ ಸಮುದಾಯ ಪೋಲಿಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮನೆ ಮನೆಗೆ ಪೋಲಿಸ್ ಎಂಬ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ.
ನಾಗರಿಕರ ಶಾಂತಿ ಸುವ್ಯವಸ್ಥೆ ಹಾಗೂ ಅಪರಾಧಗಳನ್ನು ಪತ್ತೆ ಮಾಡಿ, ನಾಗರಿಕರಿಗೆ ಉತ್ತಮ ಸೇವೆಯನ್ನು ನೀಡಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಮನೆ ಮನೆಗೆ ಪೋಲಿಸ್ ಕರ್ನಾಟಕ ಸರಕಾರದ ಯೋಜನೆಯನ್ನು ಶಿರ್ವ ಪೋಲಿಸ್ ಠಾಣಾ ವತಿಯಿಂದ ಜಿಲ್ಲಾ ಪೋಲಿಸ್ ಅಧೀಕ್ಷಕರು ಶ್ರೀ ಹರಿರಾಮ್ ಶಂಕರ್ ಐಪಿಎಸ್ ಇವರ ಮಾರ್ಗದರ್ಶನದಲ್ಲಿ ಶಿರ್ವ ಠಾಣಾ ಎಸ್‌ಐ ಶ್ರೀ ಮಂಜುನಾಥ್ ಮರ್ಬಾದ್ ಇವರ ನೇತ್ರತ್ವದಲ್ಲಿ ಠಾಣಾ ಎಎಸ್‌ಐ ಆಗಿರುವ ಶ್ರೀ ಸುದೇಶ್ ಶೆಟ್ಟಿ ಹಾಗೂ ಪಿಸಿ ಮಂಜುನಾಥ್ ಅಡಿಗ ಹಾಗೂ ಸಿಬ್ಬಂದಿಗಳು ಮನೆ ಮನೆಗೆ ಪೋಲಿಸ್ ವ್ಯವಸ್ಥೆಯನ್ನು ಶಿರ್ವದ ಪರಿಸರದಲ್ಲಿ ಮನೆ ಮನೆಗೆ ಹೋಗಿ ಅವರ ಅಹವಾಲುಗಳನ್ನು ಕೊಟ್ಟು ಸ್ಥಳದಲ್ಲಿಯೇ ಪರಿಹರಿಸಿಕೊಂಡು ಬಂದಿರುತ್ತಾರೆ. ಈ ಕಾರ್ಯಕ್ರಮಕ್ಕೆ ಶಿರ್ವದ ಹಾಗೂ ಆಸುಪಾಸಿನ ಜನತೆ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ