ಶಿರ್ವ: ಪಿರ್ಯಾದಿ ಪ್ರಸನ್ನ ಸದಾಶಿವ ಶೆಟ್ಟಿ (54) ಹೆಜಮಾಡಿ ಗ್ರಾಮ, ಕಾಪು ತಾಲೂಕು ಇವರು ದಿನಾಂಕ:30.11.2025 ರಂದು KA-20-MC-1647 ನೇ ರೆನಾಲ್ಟ್ ಕ್ವಿಡ್ ಕಾರಿನಲ್ಲಿ ಚಾಲಕರಾಗಿ ಹೆಂಡತಿ ಶ್ರೀಮತಿ ಸ್ಮಿತಾ ಶೆಟ್ಟಿರವರೊಂದಿಗೆ ಸುಭಾಸ್ ನಗರದಿಂದ ಹೆಜಮಾಡಿ ಗ್ರಾಮದಲ್ಲಿರುವ ಅವರ ಮನೆಗೆ ಹೋಗುತ್ತಿರುವಾಗ ಸಮಯ ರಾತ್ರಿ 9.57 ಗಂಟೆ ಸುಮಾರಿಗೆ ಕಾಪು ತಾಲೂಕು ಕುರ್ಕಾಲು ಗ್ರಾಮದ ಸುಭಾಸ್ ನಗರದ ನಯನ ಐಸ್ ಕ್ರೀಂ ಬಳಿ ಇರುವ ಬಸ್ ಸ್ಟಾಂಡ್ ಸಮೀಪ ತಲುಪುತ್ತಿದ್ದಂತೆ ಅದೇ ಸಮಯಕ್ಕೆ ಕಾರು ನಂಬ್ರ KA-19-P-1741ನೇದರ ಚಾಲಕ ನವೀನ್ ಪೀಟರ್ ಮಥಾಯಸ್ ಎಂಬಾತನು ಕೃಷ್ಣ ಎಂಬವರನ್ನು ಕುಳ್ಳಿರಿಸಿಕೊಂಡು ಕಟಪಾಡಿ ಕಡೆಯಿಂದ ಶಿರ್ವ ಕಡಗೆ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಕಾರನ್ನು ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ನಂತರ ಪಿರ್ಯಾದಿದಾರರ ಹಿಂದೆ ಬರುತ್ತಿದ್ದ KA-20-ME-0580 ನೇ ನೊಂದಾಣಿ ಸಂಖ್ಯೆಯ ಕಾರಿಗೂ ಡಿಕ್ಕಿ ಹೊಡೆದ ಪರಿಣಾಮ ಮೂರು ಕಾರುಗಳು ಜಖಂ ಆಗಿರುತ್ತವೆ. ಕಾರು ನಂಬ್ರ :KA-20-MC-1647 ಮತ್ತು ಕಾರು ನಂಬ್ರ KA-20- ME-0580 ಇದ್ದವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಕೃಷ್ಣ ಎಂಬವರಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2025 ಕಲಂ 281, 125(A), BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ





