ದಿನಾಂಕ: 15.02.2024 ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ಸರಹದ್ದಿನ, ಕೂಡ್ಲು ಮುಖ್ಯ ರಸ್ತೆಯ ಮನೆಯೊಂದರಲ್ಲಿ ಓರ್ವ ವಿದೇಶಿ ಮಹಿಳೆ, ವಾಸಕ್ಕೆಂದು ಮನೆಯನ್ನು ಬಾಡಿಗೆ ಪಡೆದುಕೊಂಡು, ಕೆಲವು ವಿದೇಶಿ ಮಹಿಳೆಯರಿಗೆ ಹಣದ ಆಮೀಷ ತೋರಿಸಿ, ಅಕ್ರಮವಾಗಿ ಅವರನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡು ವೇಶ್ಯವಾಟಿಕೆಯನ್ನು ನಡೆಸುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದು, ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ/ಸಿಬ್ಬಂದಿಯವರು ದಾಳಿ ನಡೆಸಿ ಓರ್ವ ವಿದೇಶಿ ಮಹಿಳೆ ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ಮೂರು ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿರುತ್ತದೆ.