ರಾಮಮೂರ್ತಿ ನಗರ ಮುಖ್ಯ ರಸ್ತೆಯಲ್ಲಿರುವ ಷೋರೂಮ್‌ವೊಂದರಲ್ಲಿ ಲ್ಯಾಪ್‌ಟಾಪ್ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಷೋರೂಮ್‌ನಲ್ಲಿ ಸೆಲ್ಸ್ ಎಕ್ಸಿಕ್ಯೂಟಿವ್ ಹಾಗೂ ಇತರೆ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಷೋರೂಮ್‌ನ ವ್ಯವಸ್ಥಾಪಕರು ದಿನಾಂಕ:23/07/2024 ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದು, ದೂರಿನಲ್ಲಿ ಷೋರೂಮ್‌ನಿಂದ ಕಂಪನಿಯ ಲ್ಯಾಪ್‌ಟಾಪ್‌ಗಳು, 1 ಡೆಲ್ ಕಂಪನಿಯ ಲ್ಯಾಪ್‌ಟಾಪ್ ಹಾಗೂ 16 ಹೆಚ್.ಪಿ ಕಂಪನಿಯ ಪೆನ್‌ಡ್ರೈವ್‌ಗಳನ್ನು, ಜುಲೈ ಮಾಹೆಯ ಮೊದಲನೆ ಮತ್ತು ಎರಡನೇ ವಾರದಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿರುತ್ತದೆ ತನಿಖೆಯನ್ನು ಮುಂದುವರೆಸಿದ ಪೊಲೀಸರು. ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ದಿನಾಂಕ:24/07/2024ರಂದು ಷೋರೂಮ್‌ನ ಸೆಕ್ಸ್ ಎಕ್ಸಿಕ್ಯೂಟಿವ್‌ನನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಆತನು ಈ ಪ್ರಕರಣದಲ್ಲಿ ಕಳುವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಕಳುವು ಮಾಡಿದ 4 ಲ್ಯಾಪ್‌ಟಾಪ್‌ಗಳ ಪೈಕಿ 1 ಹೆಚ್.ಪಿ ಕಂಪನಿಯ ಲ್ಯಾಪ್‌ಟಾಪ್‌ನ್ನು ಮತ್ತು II ಹೆಚ್.ಪಿ ಪೆನ್ ಡ್ರೈವ್‌ಗಳನ್ನು ಅಪರಿಚಿತ ಸಾರ್ವಜನಿಕರಿಗೆ ಮಾರಾಟ ಮಾಡಿ, ಬಂದಂತಹ ಹಣವನ್ನು ಖರ್ಚು ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾನೆ. ಉಳಿದ 3 ಲ್ಯಾಪ್ ಟಾಪ್ ಹಾಗೂ 05 ಹೆಚ್.ಪಿ ಪೆನ್‌ಡ್ರೈವ್‌ಗಳನ್ನು ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿರುತ್ತಾನೆ. ಅದೇ ದಿನ ಅವುಗಳನ್ನು ಆರೋಪಿಯ ವಾಸದ ಮನೆಯಿಂದ ವಶಕ್ಕೆ ಪಡೆಯಲಾಯಿತು.
ದಿನಾಂಕ:25/07/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.