Source : Kendhooli
ಕ್ರೀಡಾ ಕೋಟಾದಲ್ಲಿ ಸಾಧನ ಮಾಡಿದ ಕರ್ನಾಟಕ ಪೊಲೀಸ್ ,ಪಂಜಾಬ್ ನ ಪಾಟಿಯಾದಲ್ಲಿ ನಡೆದ 60ನೇ ಅಂತಾರಾಜ್ಯ ಹಿರಿಯರ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಸಿ ಎ ರ್ ಉತ್ತರ ಹೆಗ್ಗಡೆ ನಗರ ಘಟಕದ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಪುರುಷರ 800 ಮೀಟರ್ ಓಟದಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ .
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪುರುಷರ 800 ಮೀಟರ್ ಓಟದಲ್ಲಿ 1ನಿಮಿಷ 51.86 ಸೆಕೆಂಡ್ ಗಳಲ್ಲಿ ಗುರಿತಲುಪಿ ಉತ್ತಮ ಸಮಯವನ್ನು ನೀಡುವುದರ ಮೂಲಕ ಐದನೇ ಸ್ಥಾನ ಪಡೆದು ರಾಜ್ಯಕ್ಕೆ 2ಅಂಕಗಳನ್ನು ತಂದು ಕೊಟ್ಟು ಕರ್ನಾಟಕದ ಕೀರ್ತಿ ಪಾತಕೆಯನ್ನು ಅಂತಾರಾಜ್ಯ ಕ್ರೀಡಾಂಗಣದಲ್ಲಿ ಹಾರಿಸಿದ್ದಾರೆ ..ತರಬೇತಿಯನ್ನು ನೀಡಿ ಕರ್ನಾಟಕಕ್ಕೆ ಕೀರ್ತಿ ತರಲು ಶ್ರಮಿಸಿದ್ದಾರೆ .
ಕ್ರೀಡಾಪಟು ವಿನಾ ಸಾಧನೆ ಮೆಚ್ಚಿ ಚೆರ್ಮನ್ ರಾಜ್ಯ ಪೊಲೀಸ್ ಕೇಡಅಭಿವೃದ್ಧಿ ಮಂಡಲಿ ಅಧ್ಯಕ್ಷ ಅಲೋಕ್ ಕುಮಾರ್ ಹಾಗೂ ಕಮಾಂಡೆಂಟ್ ಮೂರನೇ ಪಡೆ ಹಾಗೂ ಸಹಾಯಕ ಕಾರ್ಯದರ್ಶಿ ಎಂ .ವಿ. ರಾಮಕೃಷ್ಣ ಪ್ರಸಾದ್ ರವರು ಪ್ರಶಂಸಿಸಿ ಅಭಿನಂದಿಸಿದರು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್