ಚಿಕ್ಕಮಗಳೂರು ಯುವತಿ ಮೇಲೆ ಆಸೀಡ್ ದಾಳಿ ನಡೆಸಿದ್ದ ಅಪರಾಧಿಗಳಿಗೆ ಸೆಕೆಂಡ್ ಅಡಿಷನಲ್ ಡಿಸ್ಟ್ರಿಕ್ಟ್ ಆಂಡ್ ಸೆಷನ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ದಿನಾಂಕ 18-04-2015ರಂದು ಈ ದುರ್ಘಟನೆ ಸಂಭವಿಸಿದ್ದು, ಪ್ರಕರಣದ ಆರೋಪಿಗಳಿಗೆ 5 ವರ್ಷ 11 ತಿಂಗಳು 1 ದಿನಗಳ ಬಳಿಕ ಶಿಕ್ಷೆ ಪ್ರಕಟವಾಗಿದೆ. ಈ ಬಗ್ಗೆ ಪ್ರಕರಣದ ಅಂದಿನ ತನಿಖಾಧಿಕಾರಿ ಈಗಿನ ಮಡಿವಾಳ ಎಸಿಪಿ ಸುಧೀರ್ ಹೆಗ್ಡೆ ಮಾಹಿತಿ ನೀಡಿದ್ದಾರೆ. ಚಿಕ್ಕ ಮಗಳೂರಿನ ಶೃಂಗೇರಿಯಲ್ಲಿ ನಡೆದಿದ್ದು, ದಾರಿ ಕೇಳುವ ನೆಪದಲ್ಲಿ ಅಪರಾಧಿಗಳು ಆಸಿಡ್ ಹಾಕಿದ್ದರು. ಕೂಡಲೇ ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ನೊಂದ ಯುವತಿ ಗಣೇಶ್ ಎಂದು ತಡವರಿಸುತ್ತಿದ್ದಳು. ಈ ಮಾಹಿತಿ ಮೇರೆಗೆ ತನಿಖೆ ನಡೆಸಿದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿ ಗಣೇಶ್ ನೊಂದ ಯುವತಿಯ ಪಕ್ಕದ ಮನೆಯವನಾಗಿದ್ದ. 2014ರಲ್ಲಿ ಯುವತಿಯನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದಾನೆ. ಆದರೆ ಯುವತಿ ಗಣೇಶ್ ಕುಡಿಯುತ್ತಾನೆ ಎನ್ನುವ ಕಾರಣ ನಿರಾಕರಿಸಿದ್ದಳು. ಇದೇ ಕೋಪಕ್ಕೆ ಗಣೇಶ್ ಯುವತಿ ಮೇಲೆ ಆಸಿಡ್ ದಾಳಿ ಮಾಡುವಂತೆ ಕಬೀರ್ ಮತ್ತು ಮಜೀದ್ ಎಂಬಾತನಿಗೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಪ್ರಕರಣದ ತನಿಖೆ ಅಂತ್ಯಗೊಂಡಿದ್ದು, ಆರೋಪಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ನನ್ನ ಜೀವನ ಸಾರ್ಥಕತೆ ಹೊಂದಿದ ಪ್ರಕರಣ ಎಂದು ಎಸಿಪಿ ಸುಧೀರ್ ಹೆಗ್ಡೆ ಹೇಳಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್