ದಿನಾಂಕ:16/11/2025 ರಂದು ರಾತ್ರಿ 19:45 ಗಂಟೆಗೆ ಮೊಯಿದ್ದೀನ್‌ಪುರ ಶಿರೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಮೇರೆಗೆ ತಿಮ್ಮೇಶ್ ಬಿ ಎನ್ ಪಿಎಸ್ ಐ ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂಧಿಯರವರ ಜೊತೆ ಸ್ಥಳಕ್ಕೆ ಸ್ಥಳಕ್ಕೆ ಹೋದಾಗ ಸಾರ್ವಜನಿಕ ಸ್ಥಳದಲ್ಲಿ ಕೆಲವರು ನೆಲದ ಮೇಲೆ ಕಪ್ಪು ಬಣ್ಣದ ಟಾರ್ಪಾಲ್‌ಯನ್ನು ಹಾಸಿ ಕ್ಯಾಂಡಲ್ ಬೆಳಕಿನಲ್ಲಿ ಅದರಲ್ಲಿ ಓರ್ವನು ತನ್ನ ಕೈಯಲ್ಲಿರುವ ಇಸ್ಪೀಟ್ ಎಲೆಗಳನ್ನು ಒಂದೊಂದಾಗಿ ಟಾರ್ಪಾಲ್ ಮೇಲೆ ಎರಡು ಭಾಗಗಳಾಗಿ ಹಾಕುತ್ತಿರುವಾಗ ಉಳಿದವರು ಅಂದರ್ 100 ರೂಪಾಯಿ ಬಾಹರ್ 200 ರೂಪಾಯಿ ಎಂದು ಹೇಳುತ್ತಾ ಹಣವನ್ನು ಪಣವಾಗಿರಿಸಿಕೊಂಡು ಜೂಜಾಟ ಆಡುತ್ತಿದ್ದ 1. ಶೇಖರ (36) ತಂದೆ: ಬಸವಪ್ಪ ಹಣಬರ ವಾಸ ಜೋಗೂರು , ಪಡುವರಿ ಗ್ರಾಮ, 2. ಹರೀಶ್ ನಾಯ್ಕ್ (42) ತಂದೆ: ವೆಂಕಟೇಶ ನಾಯ್ಕ್ ವಾಸ ಬೈದನ್ ಮನೆ, ಮಾರುತಿ ನಗರ, ಭಟ್ಕಳ, 3.ದೇವಂದ್ರ ಜಟ್ಟಪ್ಪ ನಾಯ್ಕ್ ( 38) ತಂದೆ: ಜಟ್ಟಪ್ಪ ವಾಸ: ಮಂಡೂಳಿ ಭಟ್ಕಳ ತಾಲೂಕು 4.ಆಶೋಕ ವೆಂಕಟೇಶ ನಾಯ್ಕ್(42), ತಂದೆ: ವೆಂಕಟೇಶ ನಾಯ್ಕ್ ವಾಸ: ತಲಾನ್ ಮುಟ್ಟಳ್ಳಿ ಪೋಸ್ಟ್ , ಭಟ್ಕಳ ತಾಲೂಕು 5.ನಾಗಪ್ಪ ಗೊವೀಂದ ನಾಯ್ಕ್(45) ತಂದೆ: ಗೋವಿಂದ ವಾಸ: ಕಲ್ಲಬಂಡಿ ಮನೆ ಬೆಳ್ಕ ಪೋಸ್ಟ್ ಭಟ್ಕಳ ತಾಲೂಕು 6] ದಿನಕರ(32), ತಂದೆ: ರಾಮ ವಾಸ: ಮೊಯಿದ್ದೀನ್ ಪುರ ಶಿರೂರು ಗ್ರಾಮ ಇವರನ್ನು ಹಿಡಿದುಕೊಂಡಿರುವುದಾಗಿದೆ. ಸದ್ರಿಯವರುಗಳನ್ನು ವಿಚಾರಿಸಿದಾಗ ಸ್ವಂತ ಲಾಭಕ್ಕಾಗಿ ಇಸ್ಪೀಟ್ ಜುಗಾರಿ ಆಟವಾಡುತ್ತಿರುವುದಾಗಿ ತಿಳಿಸಿದ್ದು ಆಪಾದಿತರು ಇಸ್ಪೀಟ್ ಜುಗಾರಿ ಆಡುತ್ತಿದ್ದ ಸ್ಥಳದಲ್ಲಿ ಎದುರುಗಡೆ ಹಣವನ್ನು ಇಟ್ಟುಕೊಂಡು ಟಾರ್ಪಾಲ್ ಮೇಲೆ ಜೂಜಾಟಕ್ಕೆ ಹಾಕುತ್ತಿದ್ದ ಹಣವನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ 1) ಇಸ್ಟೀಟ್, ಡೈಮಂಡ್, ಆಟೀನ್, ಕ್ಲವರ್ ಚಿತ್ರ ಇರುವ ಇಸ್ಟೀಟ್ ಎಲೆಗಳು-52, 2) ನಗದು ರೂಪಾಯಿ-24010/- ರೂ ಹಾಗೂ ಸ್ಥಳದಲ್ಲಿದ್ದ 1. KA.47X3978 ಅಕ್ಟಿವ್ ಡಿಯೋ, 2. KA20.HF.5957 HERO SUPER SPLENDER 3. KA.20.X.0003SUPER SPLENDER ಮತ್ತು 4. KA.20EN.1250 ಬಜಾಜ್ ಪಲ್ಸರ್ ಮೋಟಾರ ಸೈಕಲ್‌ನೊಂದಿಗೆ ಸ್ವತ್ತುಗಳನ್ನು ವಶಪಡಿಸಿ ಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 200/2025 ಕಲಂ: 87 KP Actರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







