ಬೆಂಗಳೂರು ನಗರದ ಹೆಚ್.ಎ.ಎಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ:22.03.2024 ರಂದು ಪಿರಾದುದಾರರು ರಸ್ತೆಯಲ್ಲಿ ಹೋಗುವಾಗ ಯಾರೋ ಮೊಬೈಲ್ ಪೋನ್‌ನನ್ನು ಕಿತ್ತುಗೊಂಡು ಹೋಗಿರುವುದಾಗಿ ದೂರನ್ನು ನೀಡಿರುತ್ತಾರೆ. ಈ ಕುರಿತು ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾತಿರುತ್ತದೆ.
ತನಿಖೆ ಕೈಗೊಂಡ ಪೊಲೀಸರು ದಿನಾಂಕ:25/03/2024 ರಂದು ಓರ್ವ ವ್ಯಕ್ತಿಯನ್ನು ವಶಕ್ಕೆ
ಪಡೆದುಕೊಂಡಿರುತ್ತಾರೆ. ಆತನನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಆತನಿಂದ ಒಟ್ಟು 45
ವಿವಿಧ ಕಂಪನಿಯ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 10,00,000/- (ಹತ್ತು ಲಕ್ಷ ರೂಪಾಯಿ) ಆಗಿರುತ್ತದೆ.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ||. ಶಿವಕುಮಾರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀಮತಿ. ಪ್ರಯದರ್ಶಿನಿ ಈಶ್ವರ್ ಸಾಣೇಕೊಪ್ಪ, ಸಹಾಯಕ ಪೊಲೀಸ್ ಆಯುಕ್ತರು, ಮಾರತ್‌ಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ, ಹೆಚ್.ಎ.ಎಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.