ಮಹಿಳೆಯರ ಮೇಲೆ ನಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹಣೆಯ ಕುರಿತಂತೆ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಕಾರ್ಯಾಗಾರವನ್ನು ನಡೆಸಿದ್ದು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಮಾತನಾಡಿ ಕೃತ್ಯ ನಡೆದಾಗ ಸಾಕ್ಷಿಗಳ ಸಂಗ್ರಹ ಅಪರಾಧಿಗಳ ಪತ್ತೆ ಮತ್ತು ಶಿಕ್ಷೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ .ಆರ್. ಶಿವಕುಮಾರ್ ರವರು ಸಹ ಹಾಜರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಕೃತ್ಯ ನಡೆದ ಸ್ಥಳದ ಮಾದರಿಯನ್ನು ನೀಡುವ ಮೂಲಕ ನಡೆಸಲಾಯಿತು. ಜಿಲ್ಲೆಯ ಎಲ್ಲಾ ವೃತ್ತ/ ಪೊಲೀಸ್ ಠಾಣೆಗಳ ಪಿಐ ಗಳು, ಪಿಎಸ್ಐ ಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಉಪನ್ಯಾಸ ನೀಡಿದರು
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,