107 ಗ್ರಾಂ ಚಿನ್ನಾಭರಣ, 100 ಗ್ರಾಂ ದೇವರ ಬೆಳ್ಳಿಯ ಮುಖವಾಡ ವಶ. ಮೌಲ್ಯ 17 ಲಕ್ಷ.
ಬೊಮ್ಮನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ, ವಿರಾಟ್ ನಗರದಲ್ಲಿ ವಾಸವಿರುವ ಫಿರಾದುದಾರರು ದಿನಾಂಕ:28/08/2024 ರಂದು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗನಿಗೆ ಮದುವೆ ನಿಶ್ಚಯವಾಗಿರುತ್ತದೆ. ಮದುವೆಗೆಂದು ಒಡವೆಗಳನ್ನು ಖರೀದಿಸಿ ಮನೆಯ ಲಾಕರ್‌ನಲ್ಲಿ ಇಟ್ಟಿರುತ್ತಾರೆ. ದಿನಾಂಕ:28/08/2024 ರಂದು ಮದುವೆ ಲಗ್ನಪತ್ರಿಕೆ ಹಂಚಲು ಪಿರಾದುದಾರರು ಮತ್ತು ಪಿರಾದುದಾರರ ಗಂಡ ಇಬ್ಬರೂ ಹೋಗಿರುತ್ತಾರೆ. ಪಿರಾದುದಾರರ ಗಂಡ ಸಂಜೆ ವಾಪಸ್ ಮನೆಗೆ ಬಂದು ನೋಡಲಾಗಿ ಕೊಠಡಿಯಲ್ಲಿದ್ದ ಲಾಕ ಬಾಗಿಲು ತೆರೆದಿದ್ದು, ಒಡವೆಗಳು ಕಾಣೆಯಾಗಿದ್ದನ್ನು ಗಮನಿಸಿ, ಪಿರಾದುದಾರರ ಗಂಡನು ಪಿತ್ಯಾದಿಯವರಿಗೆ ಫೋನ್ ಮಾಡಿ ತಿಳಿಸಿರುತ್ತಾರೆ. ಪಿರಾದುದಾರರು ಮನೆಗೆ ಬಂದು ಲಾಕರ್‌ನ್ನು ಪರಿಶೀಲಿಸಿದಾಗ, ಲಾಕರ್‌ನಲ್ಲಿದ್ದ 107 ಗ್ರಾಂ ಚಿನ್ನದ ಒಡವೆಗಳು, 100 ಗ್ರಾಂ ಬೆಳ್ಳಿಯ ದೇವರ ಮುಖವಾಡ ಹಾಗೂ 45,000/- ನಗದು ಹಣ ಕಳುವಾಗಿರುತ್ತದೆ. ಮನೆಯಲ್ಲಿ ಫಿರಾದುದಾರರ ಕಿರಿಯ ಮಗ ಇದ್ದು, ಆತನ ಮೇಲೆ ಅನುಮಾನವಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರರಕಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ತನಿಖೆಯನ್ನು ಕೈಗೊಂಡು ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ:29/08/2024 ರಂದು ಫಿರಾದುದಾರರ ಕಿರಿಯ ಮಗನನ್ನು ಯಲಹಂಕ ರೈಲ್ವೆ ನಿಲ್ದಾಣದಲ್ಲಿ, ಈ ಪ್ರಕರಣದಲ್ಲಿ ಕಳುವಾಗಿದ್ದ ಮಾಲು ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆಯಲ್ಲಿ ಆರೋಪಿಯು ಆನ್‌ಲೈನ್ ಬೆಟ್ಟಿಂಗ್ ಚಟದ ವ್ಯಸನಿಯಾಗಿದ್ದು, ಬೆಟ್ಟಿಂಗ್‌ಗೆ ಹಣದ ಅವಶ್ಯಕತೆ ಇದ್ದುದ್ದರಿಂದ, ಮನೆಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ದೇವರ ಮುಖವಾಡ ಹಾಗೂ ನಗದು ಹಣ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಆರೋಪಿತನ ವಶದಿಂದ 107 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿಯ ದೇವರ ಮುಖವಾಡವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 7,00,000/- (ಏಳು ಲಕ್ಷ ರೂಪಾಯಿ).
ದಿನಾಂಕ:29/08/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಆತ್ಮೀಯ ವಿಭಾಗದ ಉಪ ಪೊಲೀಸ್ ಆಯುಕ್ತರು ಶ್ರೀಮತಿ.ಸಾರಾ ಫಾತಿಮ, ಐ.ಪಿ.ಎಸ್ ಮತ್ತು ಮೈಕೋಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶ್ರೀ.ಬಿ.ಶಿವಶಂಕರ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಪ್ರೀತಮ್.ಎ.ಡಿ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.