ಉಡುಪಿ: 06.03.2026 ರಂದು ರಾತ್ರಿ 7:45 ಗಂಟೆಯಿಂದ ರಾತ್ರಿ 10:15 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿ ಯಂ. ಮಂಜುನಾಥ ರಾವ್, ಪ್ರಾಯ: 77 ವರ್ಷ, ತಂದೆ: ದಿ. ಮಧ್ವರಾವ್, ವಾಸ: ಹೇರಾಡಿ ಐಟಿಐ ಕಾಲೇಜಿನ ಬಳಿ, ಶ್ರೀ ಸುಬ್ರಹ್ಮಣ್ಯ, ಬಾರಕೂರು ಅಂಚೆ, ಹೇರಾಡಿ ಗ್ರಾಮ, ಬ್ರಹ್ಮಾವರ ಇವರು ಹಾಗೂ ಅವರ ಹೆಂಡತಿ ಮನೆಗೆ ಬೀಗ ಹಾಕಿ ಬಾರಕೂರು ನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ಹೋದಾಗ, ಯಾರೋ ಕಳ್ಳರು ಮನೆಯ ಎದುರು ಬಾಗಿಲು ಒಡೆದು ಬೆಡ್ ರೂಮ್‌ನಲ್ಲಿರುವ ಗೋಡ್ರೇಜ್ ಬೀಗ ಒಡೆದು ಅದರಲ್ಲಿದ್ದ 1) ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್ – 47 ಗ್ರಾಂ. 2) ಎರಡು ಚಿನ್ನದ (ಮುತ್ತಿನ) ಬಳೆ – 32 ಗ್ರಾಂ. 3) ಒಂದು ಜೋತೆ ಚಿನ್ನದ ಬೆಂಡೋಲೆ – 6 ಗ್ರಾಂ. 4) ಚಿನ್ನದ ಉಂಗುರ – 4 ಗ್ರಾಂ. 5) ಚಿನ್ನದ ಬೆಂಡೋಲೆ – 3 ಗ್ರಾಂ. 6) ಬೆಳ್ಳಿಯ ಹರಿವಾಣ ಮತ್ತು ಕವಳಿಗೆ – 250 ಗ್ರಾಂ. 7) ನಗದು – ರೂ. 49000/- ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಒಟ್ಟು ಸೊತ್ತು ಹಾಗೂ ನಗದಿನ ಮೌಲ್ಯ ರೂ. 14,67,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ : 45/2026 US 334(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆಯನ್ನು ಬೆಳ್ಳಿಯಪ್ಪ, ಪೊಲೀಸ್ ಉಪಾಧೀಕ್ಷರು ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಗೋಪಿಕೃಷ್ಣ, ಸಿ.ಪಿ.ಐ. ಬ್ರಹ್ಮಾವರ, ಅಶೋಕ್ ಮಾಳಾಬಾಗಿ, ಪಿ.ಎಸ್.ಐ (ಕಾ&ಸು) ಬ್ರಹ್ಮಾವರ ಠಾಣೆ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಕಿರಣ್, ಸಿದ್ದಪ್ಪ ಸಕನಳ್ಳಿ, ಸುರೇಶ್ ಬಾಬು, ಎ.ಎಸ್.ಐ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ, ಜಯಶೀಲಾ ಇವರ ತಂಡ ಆರೋಪಿ ಪ್ರವೀಣ್ ಕುಮಾರ್ ಕೆ, ತಂದೆ : ಸುಬ್ರಾಯ, ವಾಸ: ನರಸಿಂಹ ಸಂಕೀರ್ಣ, ಮೊದಲನೇ ಮಹಡಿ, ಬಾರಕೂರು ಈತನನ್ನು ಬಂಧಿಸಿ ಆತನಿಂದ ಕಳವು ಸ್ವಾತದ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 7500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







