ದಿನಾಂಕ 16-10-2025 ರಂದು ಹೇರಾಡಿ ಗ್ರಾಮದ ಕೂಡ್ಲಿ ಎಂಬಲ್ಲಿನ ಸರಕಾರಿ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಹಿಂಸಾತ್ಮಕವಾಗಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಪಿರ್ಯಾದಿ, ಜಯಕುಮಾರ್ ಎಎಸ್ಐ
ಬ್ರಹ್ಮಾವರ ಪೊಲೀಸ್ ಠಾಣೆ ಇವರು ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ 16.45 ಕ್ಕೆ ಧಾಳಿ ನಡೆಸಿದ್ದು, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರನ್ನು ಕಂಡು ಜನರು ಓಡಿಹೋಗಿದ್ದು, ಸಿಬ್ಬಂದಿಯವರ ಸಹಾಯದಿಂದ ಓಡಿ ಹೋಗುತ್ತಿದ್ದವರ ಪೈಕಿ ಇಬ್ಬರನ್ನು ಹಿಡಿದು ವಿಚಾರಿಸಲಾಗಿ, ಸದ್ರಿಯವರು ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದು, ಬಳಿಕ ಹೆಸರು ವಿಳಾಸ ವಿಚಾರಿಸಲಾಗಿ ಪ್ರಶಾಂತ್ ಹಾಗೂ ರಾಘವೇಂದ್ರ ಎಂಬುದಾಗಿ ತಿಳಿಸಿದ್ದು, ಸದ್ರಿಯವರಿಂದ ಆಟಕ್ಕೆ ಬಳಸಿದ ನಗದು 2120 /- ರೂ ಹಾಗೂ ಸ್ಥಳದಲ್ಲಿ ಜೂಜಿಗೆ ಕಟ್ಟಿದ 2 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಕೋಳಿಯ ಕಾಲಿಗೆ ಕಟ್ಟಿದ 2 ನೈಲಾನ್ ಹಗ್ಗ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು, ಓಡಿಹೋಗುತ್ತಿದ್ದವರ ಬಗ್ಗೆ ವಿಚಾರಿಸಲಾಗಿ ಲೋಕೇಶ್, ವಿಜೇತ, ಅಭಿ, ಅರುಣ್ ಶೆಟ್ಟಿ, ಹಾಗೂ ಇತರರು ಓಡಿಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 211/2025 : ಕಲಂ 87, 93 KP Act & 11 Prevention of Cruelty to Animals Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ