ಶಿರ್ವಾ: ಪಿರ್ಯಾದಿದಾರರಾಧ ಜೆರಾಲ್ಡ್ ನೊರೊನ್ಹಾ(41), ತಂದೆ: ಪ್ರಾನ್ಸಿಸ್ ನೊರೋನ್ಹಾ, ವಾಸ: ಶ್ರೀದೇವಿ ಅನ್ನ ಪೂರ್ಣೇಶ್ವರಿ ಗ್ಯಾರೇಜ್ ಹತ್ತಿರ, ಮೊದಲನೇ ಮಹಡಿ, ಮುಖ್ಯರಸ್ತೆ, ಮೂಡುಬೆಳ್ಳೆ, ಕಾಪು ಇವರು KA-20 MB-5546 ನೇ ನೊಂದಣಿ ಸಂಖ್ಯೆಯ ಮಹೇಂದ್ರ ವಾಹನದ ನೊಂದಣಿ ಮಾಲಕರಾಗಿರುತ್ತಾರೆ. ಪಿರ್ಯಾದುದಾರರು ಉಡುಪಿ ಟೌನ್ ಕೋ-ಅಪರೇಟಿವ್ ಬ್ಯಾಂಕ್ನಲ್ಲಿ ಆಸ್ತಿಗೆ ಸಂಬಂದಿಸಿದಂತೆ ಭದ್ರತಾ ಸಾಲವನ್ನು ಪಡೆದಿರುತ್ತಾರೆ. ದಿನಾಂಕ 30/09/2025 ರಂದು ಭದ್ರತಾ ಸಾಲದ ಮರುಪಾವತಿ ಉದ್ದೇಶಕ್ಕೆ ಬ್ಯಾಂಕಿಗೆ ಹೋದಾಗ ಅಲ್ಲಿನ ಬ್ಯಾಂಕ್ ಸಿಬ್ಬಂದಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ “ಕಂತು ಕಟ್ಟಲು ಗತಿ ಇಲ್ಲದವರು ಬಾರಿ ಕಾರಿನಲ್ಲಿ ತಿರುಗಾಟ ಮಾಡುತ್ತಾರೆ ಎಷ್ಟು ದಿನ ಕಾರಿನಲ್ಲಿ ತಿರುಗಾಡ್ತೀರಿ ನೋಡುವಾ ಎಂಬುದಾಗಿ ಅವಮಾನಿಸಿರುತ್ತಾರೆ. ಬಳಿಕ ಪಿರ್ಯಾದಿದಾರರು ಅದೇ ಬ್ಯಾಂಕಿನ ಕಿನ್ನಿಮೂಲ್ಕಿಯ ಶಾಖೆಯಲ್ಲಿ ರೂ 20,000/- ಪಾವತಿಸಿರುತ್ತಾರೆ. ಪಿರ್ಯಾದುದಾರರು ಪ್ರತಿ ನಿತ್ಯ ತನ್ನ ವಾಹನವನ್ನು ಶ್ರೀದೇವಿ ಅನ್ನ ಪೂರ್ಣೇಶ್ವರಿ ಗ್ಯಾರೇಜ್ನ ಬಳಿಯಿರುವ ಹಾಲಿನ ಡೈರಿಯ ಶೆಡ್ ಹತ್ತಿರ ಕಾರನ್ನು ಇಟ್ಟು ಬೆಳಿಗ್ಗೆ 06:15 ರ ಸಮಯಕ್ಕೆ ಅಲ್ಲಿಂದ ಹೊರ ತೆಗೆದು ಪಿರ್ಯಾದುದಾರರ ಮನೆ ಬಳಿ ಇರುವ ಪ್ರಕಾಶ್ ಕ್ಲಿನಿಕ್ ಶೆಡ್ ಒಳಗೆ ಇಡುತ್ತಾರೆ. ನಂತರ ತನ್ನ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಬೆಳಿಗ್ಗೆ 8:45 ರ ಸಮಯಕ್ಕೆ ಅಲ್ಲಿಂದ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದರು. ಪಿರ್ಯಾದುದಾರರು ಎಂದಿನಂತೆ ದಿನಾಂಕ 15/11/2025 ರಂದು ಬೆಳಿಗ್ಗೆ 08:45 ಕ್ಕೆ ತನ್ನ ಮಗಳನ್ನು ಶಾಲೆಗೆ ಬಿಡುವ ಸಲುವಾಗಿ ಹಾಗೂ ಅಗತ್ಯ ಹಣಕಾಸಿನ ವಿಚಾರವಾಗಿ ಬ್ಯಾಂಕಿಗೆ ಹೋಗುವ ಸಲುವಾಗಿ ಪ್ರಕಾಶ್ ಕ್ಲಿನಿಕ್ ಬಳಿ ಹೋದಾಗ ಹಣ ಮತ್ತು ಬಂಗಾರದ ಆಭರಣವನ್ನು ಹೊಂದಿದ ತನ್ನ ಕಾರು ಸ್ಥಳದಲ್ಲಿ ಕಂಡು ಬಂದಿರುವುದಿಲ್ಲ. ಅಕ್ಕ ಪಕ್ಕದ ಪರಿಚಿತರೊಂದಿಗೆ ಕೇಳಿದಾಗ ಕಾರನ್ನು ಇಬ್ಬರು ಅನಾಮಿಕ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ವಾಹನವನ್ನು ಕಳವು ಮಾಡಿರುವುದಾಗಿ ವಿವರಿಸಿರುತ್ತಾರೆ. ಪಿರ್ಯಾದಿದಾರರ ವಾಹನ ಸಂಖ್ಯೆ KA-20 MB-5546 ರ ಮಹೇಂದ್ರ ಕಾರು ಹಾಗೂ ಕಾರಿನ ಡ್ಯಾಶ್ ಬೋರ್ಡ್ನಲ್ಲಿದ್ದ ಪಿರ್ಯಾದಿದಾರರ ಹೆಂಡತಿಯ ಸುಮಾರು 8 ಗ್ರಾಂ ಚಿನ್ನದ ಬಳೆ ಹಾಗೂ ಸುಮಾರು ರೂ.17,700/- ನಗದು ಹಾಗೂ ಕಾರಿನ ದಾಖಲೆಗಳು, ಜಾಗಕ್ಕೆ ಸಂಬಂದಿಸಿದಂತೆ ದಾಖಲಾತಿಗಳು/ಕಾಗದ ಪತ್ರಗಳು ಕಳವು ಆದ ಬಗ್ಗೆ ದಿನಾಂಕ 15/11/2025 ರಂದು ಠಾಣೆಗೆ ದೂರು ನೀಡಿರುತ್ತಾರೆ. ಈ ಬಗ್ಗೆ ವಿಚಾರಿಸಿದಾಗ ಸದ್ರಿ ವಾಹನ ಹಾಗೂ ಅದರಲ್ಲಿದ್ದ ಬಂಗಾರದ ಬಳೆ, ನಗದನ್ನು ಕಳವು ಮಾಡಿದ ವ್ಯಕ್ತಿಗಳು ಉಡುಪಿ ಟೌನ್ ಕೋ-ಅಪರೇಟಿವ್ ಬ್ಯಾಂಕ್ ಲಿ ಉಡುಪಿ ಶಾಖೆ ಇಲ್ಲಿಯ ವ್ಯವಸ್ಥಾಪಕರಾದ ರಾಘವೇಂದ್ರ ಹೆಬ್ಬಾರ್ ಮತ್ತು ಉಡುಪಿಯ ಅಶೋಕ್ ಕುಮಾರ್ ಆಗಿರುತ್ತಾರೆ ಎಂದು ತಿಳಿದು ಬಂದಿರುತ್ತದೆ. ಪಿರ್ಯಾದಿದಾರರು ಆರೋಪಿತರಲ್ಲಿ ವಿಚಾರಿಸಿದಾಗ ಕಾರಿನ ಬಗ್ಗೆ ಕೇಳಿದರೆ ನಿನ್ನನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2026 ಕಲಂ:305, 329(2), 351(2), 352, R/w 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







