ದಿನಾಂಕಃ 07/02/2021ರಂದು ಎಪಿಎಂಸಿ ಪೊಲೀಸ್ ಠಾಣೆಯ ಇನ್ಸಪೆಕ್ಟರ ರವರಾದ ಶ್ರೀ ಜಾವೀದ ಮುಶಾಪೂರಿ ಹಾಗೂ ಅವರ ತಂಡ ಸದಾಶಿವ ನಗರದ ಬಾಡಿಗೆ ಮನೆ ಮೇಲೆ ದಾಳಿ ಮಾಡಿ ಇಬ್ಬರು ಯುವತಿಯರನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣದ ತನಿಖೆ ಕೈಕೊಂಡಿರುತ್ತಾರೆ. ರಕ್ಷಿಸಿದ ಇಬ್ಬರು ಯುವತಿಯರನ್ನು ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಬೆಳಗಾವಿ ರವರ ಆರೈಕೆಯಲ್ಲಿ ಬಿಟ್ಟಿದ್ದು ಅಲ್ಲಿಯ ಯೋಜನಾಧಿಕಾರಿ ಸುರೇಖಾ ಪಾಟೀಲ ರವರು ರಕ್ಷಣೆಗೊಳಪಟ್ಟ ಯುವತಿಯರೊಡನೆ ಸಮಾಲೋಚನೆ ಮಾಡಿ ಪೊಲೀಸರ ಸಹಾಯದೊಂದಿಗೆ ರಕ್ಷಣೆಗೊಳಪಟ್ಟ ಒಬ್ಬ ಯುವತಿಯ ವಿಳಾಸ ಪತ್ತೆ ಹಚ್ಚಿ ಅಲ್ಲಿಯ ಪೊಲೀಸ್ ಠಾಣೆ ಹಾಗೂ ಯುವತಿಯ ತಂದೆಗೆ ಮಾಹಿತಿ ತಲುಪಿಸಿದರು. 2017 ರಲ್ಲಿ ಈ ಯುವತಿಯ ಅಪಹರಣ ಪ್ರಕರಣ ಉತ್ತರಪ್ರದೇಶದ ಗಾಜಿಯಾಬಾದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಇವತ್ತು ದಿನಾಂಕ 23/02/2021 ರಂದು ಉತ್ತರಪ್ರದೇಶದ ಗಾಜಿಯಾಬಾದ ಜಿಲ್ಲೆಯ ಪೊಲೀಸರು ಸಂತ್ರಸ್ತೆಯ ತಂದೆಯೊಡನೆ ಎಪಿಎಂಸಿ ಠಾಣೆಗೆ ಬಂದು ಉಜ್ವಲಾ ಕೇಂದ್ರದ ಯೋಜನಾಧಿಕಾರಿ ಇವರು ಸಂತ್ರಸ್ತೆಯನ್ನು ಹಸ್ತಾಂತರಿಸಿ ಆಕೆಯ ತಂದೆ ಹಾಗೂ ಗಾಜಿಯಾಬಾದ ಪೊಲೀಸರೊಂದಿಗೆ ಸ್ವ ಸ್ಥಳಕ್ಕೆ ಕಳುಹಿಸಿರುತ್ತಾರೆ. ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಅವರ ತಂಡ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಯೋಜನಾಧಿಕಾರಿ ಸುರೇಖಾ ಪಾಟೀಲ ರವರ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ
ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,