ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಗಳನ್ನ ಮಾತ್ರ ಈ ಕಳ್ಳರು ಕದಿಯುತ್ತಿದ್ದರು. ಬರೋಬ್ಬರಿ 60 ಬೈಕ್ ಕಳ್ಳತನ ಮಾಡಿ ನಂತರ ಅದನ್ನು ಮಾರಟ ಮಾಡುತ್ತಿದ್ದರು. ಸ್ಪ್ಲೆಂಡರ್ ಬೈಕ್ ಗಳನ್ನ ಮಾರಾಟ ಮಾಡೋದು ಸುಲಭ ಹಾಗೂ ಕಡಿಮೆ ಬೆಲೆ ಇರೋದ್ರಿಂದ ಹೆಚ್ಚು ಜನ ಕೇಳ್ತಾರೆಂದು ಈ ಬೈಕ್‌ಗಳ ಕಳ್ಳತನಕ್ಕೆ ಇಳಿದಿದ್ದರು. ಅಲ್ಲದೆ ತಮಿಳುನಾಡಿನಲ್ಲಿ ಸ್ಪ್ಲೆಂಡರ್ ಬೈಕ್ ಗೆ ಬೇಡಿಕೆ ಜಾಸ್ತಿ ಅಂತೆ, ಹೀಗಾಗಿ ಆರೋಪಿಗಳು ಸ್ಪೆಂಡರ್ ಬೈಕ್ ಮಾತ್ರ ಟಾರ್ಗೆಟ್ ಮಾಡುತ್ತಿದ್ದರು. ನಕಲಿ ಕೀ ಹಾಗೂ ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳ ಕಳ್ಳತನ ಮಾಡಲಾಗಿತ್ತು. ಸದ್ಯ ಸಿಸಿಟಿವಿ ಆದರಿಸಿ ನಾಲ್ವರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ರಂಜಿತ್, ಯುವರಾಜ್, ವಿನೋದ್ ಹಾಗೂ ಮಣಿಕಂಠ ಬಂಧಿತ ಆರೋಪಿಗಳಾಗಿದ್ದು ಇವರಿಂದ 50 ಲಕ್ಷ ಬೆಲೆಬಾಳುವ 60 ಬೈಕ್ ರಿಕವರಿ ಮಾಡಲಾಗಿದೆ.

ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







