ದಿನಾಂಕ: 14-05-2021 ರಂದು ರಾತ್ರಿ ಬೀದರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘೋಡಂಪಲ್ಲಿ ಗ್ರಾಮದಲ್ಲಿ ಬಸವರಾಜ ಬಡಿಗೇರ ಎನ್ನುವವರ ಮನೆಯಲ್ಲಿ ಕಳ್ಳತನವಾದ ಪ್ರಕರಣವನ್ನು ಮಾನ್ಯ ಬೀದರ ಜಿಲ್ಲೆ ಎಸ್ಪಿ ಡಿ.ಎಲ್. ನಾಗೇಶ, ಎಡಿಷನಲ್ ಎಸ್ಪಿ ಡಾ: ಗೋಪಾಲ್ ಎಂ. ಬ್ಯಾಕೋಡ್ ಬೀದರ ಡಿಎಸ್ಪಿ ಕೆ.ಎಂ. ಸತೀಷ ರವರ ಮಾರ್ಗದರ್ಶನದಲ್ಲಿ ಗ್ರಾಮೀಣ ವೃತ್ತದ ಸಿಪಿಐ ಶ್ರೀಕಾಂತ ಮತ್ತು ಅವರ ತಂಡವು 25 ತೊಲಾ ಬಂಗಾರ, 40 ತೊಲಾ ಬೆಳ್ಳಿ, ಹಾಗು ಒಂದು ಬೈಕ್ ಮತ್ತು ಎರಡು ಮೋಬೈಲ್ ಹಾಗು 12 ಲಕ್ಷ ರೂಪಾಯಿ ನಗದು ಸೇರಿ 25 ಲಕ್ಷ ರೂ. ಗಳ ಸ್ವತ್ತ್ನ್ನು ವಶಪಡಿಸಿಕೊಂಡಿದ್ದಾರೆ. ಹಾಗು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್