ದಿನಾಂಕ : 23.10.2025 ರಂದು ಸಾಯಂಕಾಲ 4:45 ಗಂಟೆಗೆ ತೆಕ್ಕಟ್ಟೆ ಗ್ರಾಮದ ಜನಪ್ರೀಯ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿರುವ ಎಸ್.ಪಿ. ಕ್ರಿಯೇಶನ್ ಕ್ಲಬ್ ನಲ್ಲಿ ಸುಮಾರು ಗಂಡಸರು ಕುಳಿತು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಪ್ರವೀಣ್ ಕುಮಾರ್ ಆರ್ ಪಿಎಸ್ ಐ ಕೋಟ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಆರೋಪಿಗಳಾದ
1) ಶ್ರೀನಿವಾಸ(63), ಕೋಡಿ ರಸ್ತೆ, ಹಂಗಳೂರು ಗ್ರಾಮ, ಕುಂದಾಪುರ 2) ಸೂರ್ಯ(51),ಬಿದ್ಕಲ್‌ಕಟ್ಟೆ, ಹಾರ್ದಳ್ಳಿ-ಮಂಡಳ್ಳಿ ಗ್ರಾಮ, ಬ್ರಹ್ಮಾವರ, 3) ಚಂದ್ರಹಾಸ (40), ಹನುಮಂತ ನಗರ, ಅಂಬಾಗಿಲು, ಪುತ್ತೂರು, ಉಡುಪಿ, 4) ಕೃಷ್ಣ(46), ಬೀಜಾಡಿ ಗ್ರಾಮ, ಕೊಟೇಶ್ವರ, ಕುಂದಾಪುರ, 5) ಫುರಂದರ(44), ಕೊರವಾಡಿ, ಕುಂಬಾಶಿ ಗ್ರಾಮ, ಕುಂದಾಪುರ, 6) ರಜಾಕ್(52), ಕೊಳಂಬೆ, ಬ್ರಹ್ಮಾವರ ಮತ್ತು 7) ಸದಾಶಿವ ದೇವಾಡಿಗ(48), ನೀಲಾವರ ಗ್ರಾಮ, ಬ್ರಹ್ಮಾವರ ಇವರುಗಳನ್ನು ವಶಕ್ಕೆ ಪಡೆದು, ಆಟಕ್ಕೆ ಬಳಸಿದ ನಗದು ಹಣ ರೂ. 1,130/-, ಇಸ್ಪೀಟ್ ಎಲೆಗಳು-52, ಮೊಬೈಲ್ ಹ್ಯಾಂಡ್ ಸೆಟ್ ಗಳು- 7, ಪ್ಲಾಸ್ಟಿಕ್ ಚೇರ್ ಗಳು – 40 ರೌಂಡ್ ಟೇಬಲ್ ಗಳು -3, ಪ್ಲಾಸ್ಟಿಕ್ ಸ್ಟೂಲ್ ಗಳು – 5, ಟೇಬಲ್ ಗಳು-1, ಸಿಸಿ ಕ್ಯಾಮೇರಾ ಡಿವಿಆರ್ -1 ಮತ್ತು ಮೊನಿಟರ್ -1 ನ್ನು ಮತ್ತು ಕ್ಲಬ್ ನ ಲೆಜ್ಜರ್ ಗಳು -3 ನ್ನು ಸ್ವಾಧೀನಪಡಿಸಿ ಕೊಂಡಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 193/2025 ಕಲಂ: 79, 80 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







