ನಂಜನಗೂಡು ಕೈಗಾರಿಕೆಗಳ ಒಕ್ಕೂಟ ಮತ್ತು ನಂಜನಗೂಡು ಉಪವಿಭಾಗ ಪೊಲೀಸ್ ವತಿಯಿಂದ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಉದ್ಘಾಟಿಸಿದರು. ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ದೈನಂದಿನ ಕರ್ತವ್ಯ ನಿರ್ವಹಣೆಯನ್ನು ಬಹಳ ದಕ್ಷತೆ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಅವಶ್ಯಕವಾಗಿದ್ದು ಅದಕ್ಕಾಗಿ ನಾವುಗಳು ಮಿತ ಮತ್ತು ಆರೋಗ್ಯಕರವಾದ ಆಹಾರ ಪದ್ದತಿ ಅಳವಡಿಸಿಕೊಂಡು , ದುಶ್ಚಟಗಳಿಂದ ದೂರವಿದ್ದು ,ವ್ಯಾಯಾಮ ,ಮನರಂಜನೆ, ಯೋಗಾಭ್ಯಾಸ ಇನ್ನಿತ್ಯಾದಿ ಹವ್ಯಾಸಗಳಿಂದ ಜೀವನ ಪದ್ದತಿ ಸುಧಾರಿಸಿಕೊಳ್ಳಬೇಕೆಂದರು ಅಲ್ಲದೆ ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದಷ್ಟೆ ಅನಿವಾರ್ಯವಾಗಿದ್ದು ಸದಾ ನಮ್ಮ ಚಿಂತನೆಗಳು ಸಕಾರಾತ್ಮಕಾವಾಗಿರ ಬೇಕೆಂದು ತಿಳಿಸಿದರು. ನಂಜನಗೂಡು ಕೈಗಾರಿಕೆಗಳ ಒಕ್ಕೂಟ ಅಧ್ಯಕ್ಷರಾದ ಶ್ರೀ.ರಾಂಪ್ರಸಾದ್ ರವರು,ಡಿಎಸ್ಪಿ ಶ್ರೀ.ಗೋವಿಂದರಾಜು ರವರು, ಸಿಪಿಐಗಳಾದ ಶ್ರೀ.ಲಕ್ಷ್ಮೀಕಾಂತ್ ತಳವಾರ್,ಶ್ರೀ.ಕೃಷ್ಣಪ್ಪ ರವರು ಹಾಜರಿದ್ದರು. ಅಧಿಕಾರಿ ಸಿಬ್ಬಂದಿಗಳು ಶಿಬಿರದ ಪ್ರಯೋಜನವನ್ನು ಪಡೆದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,