ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ಬೇಣ್ಗೇರಿ ನಾಗ ದೇವಸ್ಥಾನದ ಬಳಿ ವಾಸ ಮಾಡಿಕೊಂಡಿರುವ ದಿ.ಹರೀಶ್ ಹಾಗೂ ದಿ.ಶ್ವೇತಾ ಪೂಜಾರಿ ದಂಪತಿಯವರ 2 ನೇ ಮಗನಾದ ಸುಮಾರು 10 ವರ್ಷ ಪ್ರಾಯದ ಸಮೃದ್ಧ ಎಂಬ ಅಪ್ರಾಪ್ತ ಬಾಲಕನು ಆತನ ಮಾವನಾದ ವಸಂತ ಪೂಜಾರಿ ಎಂಬವರ ಜೊತೆಯಲ್ಲಿ ವಾಸಮಾಡಿಕೊಂಡಿರುತ್ತಾನೆ. ಈತನು ಗುಜ್ಜಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 07/01/2026 ರಂದು ಎಂದಿನಂತೆ ಬಾಲಕನು ಶಾಲೆಗೆ ಹೋಗಿ ಮನೆಗೆ ಬಂದು ಸಂಜೆ 6:00 ಗಂಟೆಯಿಂದ ಗುಜ್ಜಾಡಿ ಗ್ರಾಮದ ಬೇಣ್ಗೇರಿ ನಾಗ ದೇವಸ್ಥಾನದ ಬಳಿ ಇತರ ಮಕ್ಕಳೊಂದಿಗೆ ಆಟವಾಡಲು ಹೋಗಿದ್ದವನು ರಾತ್ರಿ 07:00 ಗಂಟೆಯಾದರೂ ಮನೆಗೆ ವಾಪಾಸ್ಸು ಬಾರದೇ ಕಾಣೆಯಾದ ಬಗ್ಗೆ ಆತನ ಮಾವನಾದ ವಸಂತ ಪೂಜಾರಿ ಎಂಬುವವರು ಠಾಣೆಗೆ ಬಂದು ಮಾಹಿತಿ ನೀಡಿದಂತೆ ಕೂಡಲೇ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ರವರು ಹೆಚ್ ಡಿ ಕುಲಕರ್ಣಿ, ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಶಿವಕುಮಾರ್ ಬಿ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರುರವರ ನಿರ್ದೇಶನದಂತೆ ಪವನ್ ನಾಯಕ್ (ಕಾ & ಸು), ಸುದರ್ಶನ್ ಬಿ ಎನ್ (ತನಿಖೆ) ಹಾಗೂ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ರಾಘವೇಂದ್ರ ಶೆಟ್ಟಿ, ಚಂದ್ರ ಪಿ, ರಾಘವೇಂದ್ರ ಪೂಜಾರಿ, ಸಂದೀಪ್ ಕುರಾಣಿ, ರಿತೇಶ್ ಶೆಟ್ಟಿ, ಮಾಳಿಂಗರಾಯ, ನಿತೀನ್, ಶರಣಪ್ಪ, ಮಲ್ಲಪ್ಪ, ಮಾರುತಿ ನಾಯ್ಕ, ರವಿಚಂದ್ರರವರು ಕೂಡಲೇ ಸ್ಥಳಕ್ಕೆ ಹೋಗಿ ಸದ್ರಿ ಪರಿಸರದಲ್ಲಿ ಕಾಣೆಯಾದ ಬಾಲಕನ ಪತ್ತೆಯ ಬಗ್ಗೆ ಸಾರ್ವಜನಿಕರೊಂದಿಗೆ ನಿರಂತರವಾದ ಹುಡುಕಾಟ ನಡೆಸಿ, ಬಾಲಕನ ಮನೆಯಿಂದ ಸುಮಾರು 250 ಮೀಟರ್ ದೂರದಲ್ಲಿರುವ ಬಂಡೆ ಕಲ್ಲಿನ ಕೆಳಗಡೆ ಪೊಟರೆಯಲ್ಲಿ ಮಲಗಿಕೊಂಡಿದ್ದ ಬಾಲಕನನ್ನು ಪತ್ತೆ ಹಚ್ಚಿ ಆತನ ಪೋಷಕರಿಗೆ ಒಪ್ಪಿಸಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







