ಬೆಂಗಳೂರು ನಗರದ ಹೆಚ್.ಎ.ಎಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ-26.09.2022 ರಂದು ಪಿರಾದುದಾರರ ರೂಮ್‌ನಲ್ಲಿದ್ದ ಲ್ಯಾಪ್ ಟಾಪ್, ಚಾರ್ಜರ್, ಮೌಸ್ ಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿರುತ್ತಾರೆ. ಪ್ರಕರಣದ ತನಿಖೆಯನ್ನು ಕೈಗೊಂಡು ಓರ್ವ ಮಹಿಳೆಯನ್ನು ದಿನಾಂಕ:20/03/2024 ರಂದು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದ ಮಹಿಳೆಯನ್ನು ಸುದೀರ್ಘವಾಗಿ ವಿಚಾರಣೆ ಕೈಗೊಂಡಾಗ, ಆಕೆಯು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾಳೆ. ಆಕೆಯಿಂದ ಸುಮಾರು 10,00,000/-(ಹತ್ತು ಲಕ್ಷ ರೂಪಾಯಿ) ಮೌಲ್ಯದ ವಿವಿಧ ಕಂಪನಿಯ ಒಟ್ಟು 24 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿರುತ್ತೆ.
ವಶಪಡಿಸಿಕೊಂಡ ಮಹಿಳೆಯಿಂದ ಲ್ಯಾಪ್‌ಟಾಪ್ ಕಳುವು ಪ್ರಕರಣಗಳಾದ 1) ಕೋರಮಂಗಲ ಪ್ರೊ.ಠಾಣೆಯ-01 ಪ್ರಕರಣ 2) ಇಂದಿರಾನಗರ ಪೊ.ಠಾಣೆ-01 ಪ್ರಕರಣ ಹಾಗೂ 3) ಹೆಚ್.ಎ.ಎಲ್ ಪ್ರೊ.ಠಾಣೆ-03 ಪ್ರಕರಣಗಳು ಪತ್ತೆಯಾಗಿರುತ್ತವೆ. ತನಿಖೆ ಮುಂದುವರೆದಿರುತ್ತೆ.
ವಶಪಡಿಸಿಕೊಂಡ ಮಹಿಳೆಯು, ಬೆಂಗಳೂರು ನಗರದಲ್ಲಿರುವ ಸಾಫ್ಟ್‌ವೇರ್ ಕಂಪನಿಗಳು ಮತ್ತು ಪಿಜಿ ಪ್ರದೇಶಗಳಾದ ಟಿನ್ ಪ್ಯಾಕ್ಟರಿ, ಮಾರತ್ತಹಳ್ಳಿ, ಬೆಳ್ಳಂದೂರು, ಸಿಲ್ಕ್ಬೋರ್ಡ್, ಹೆಬ್ಬಾಳ, ವೈಟ್‌ಫೀಲ್ಡ್, ಮಹದೇವಪುರ, ಇನ್ನೂ ಮುಂತಾದ ಕಡೆಗಳಲ್ಲಿ ಹೋಟೆಲ್ ಮತ್ತು ಪಿಜಿಗಳಲ್ಲಿ ಒಂದು ವಾರ ಅಥವಾ 16 ದಿನಗಳ ಕಾಲ ಉಳಿದುಕೊಂಡು ಪಿಜಿಗಳಲ್ಲಿ ಟೀ ಕುಡಿಯುವ ಮತ್ತು ಟಿಫನ್/ಊಟ ಮಾಡುವ ಸಮಯದಲ್ಲಿ ಪಿಜಿಗಳಿಗೆ ಹೋಗಿ ಅಲ್ಲಿಂದ ಲ್ಯಾಪ್ಟಾಪ್ ಗಳನ್ನು ಕಳ್ಳತನ ಮಾಡಿಕೊಂಡು ಬೆಂಗಳೂರಿನ ಮಾರತ್ತಹಳ್ಳಿ, ಯಲಹಂಕ, ಹೆಬ್ಬಾಳದಲ್ಲಿ ಲ್ಯಾಪ್‌ಟಾಪ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಳು.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಶಿವಕುಮಾರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಶ್ರೀಮತಿ, ಪ್ರಯದರ್ಶಿನಿ ಈಶ್ವರ್ ಸಾಣೇಕೊಪ್ಪ,ಸಹಾಯಕ ಪೊಲೀಸ್ ಆಯುಕ್ತರು, ಮಾರತ್‌ಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ, ಹೆಚ್.ಎ.ಎಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.