ಪಿರ್ಯಾದಿ ಸರಿತಾ ಲೂವಿಸ್ ( 39), ಹೇರಾಡಿ ಬಾರ್ಕೂರು ಅಂಚೆ, ಯಡ್ತಾಡಿ ಗ್ರಾಮ, ಬ್ರಹ್ಮಾವರ ಇವರು ನವೆಂಬರ್ 2023 ರಲ್ಲಿ ಅಂಜಲಿನ್ ಡಿಸಿಲ್ವಾ ರವರಿಂದ ಕೌಶಲ್ಯ ರವರು ಪರಿಚಯವಾಗಿ ಪಿರ್ಯಾದಿದಾರರಿಗೆ PMEGP ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದು ಪಿರ್ಯಾದಿದಾರರು ಬೇಡ ಎಂದರೂ ಆರೋಪಿ ಕೌಶಲ್ಯಳು ಒತ್ತಾಯದಿಂದ ನಂಬಿಸಿ ಒಪ್ಪಿಸಿರುತ್ತಾರೆ. ನಂತರ ದಿನಗಳಲ್ಲಿ ಸಬ್ಸಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಕಟ್ಟಬೇಕು ಎಂದು ಹೆಳಿದ್ದು, ಅದರಂತೆ ಪಿರ್ಯಾದಿದಾರರಿಂದ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬುವರಿಗೆ ನಗದು ರೂಪದಲ್ಲಿ ಒಟ್ಟು 80,72,000/- ರೂಪಾಯಿ ಹಣ ನೀಡಿರುತ್ತಾರೆ. ಹಾಗೂ ಪಿರ್ಯಾದಿದಾರರ ಸಂಬಂಧಿ ಅಂಜಲಿನ್ ಡಿಸಿಲ್ವಾ ರವರಿಗೂ ಕೂಡಾ PMEGP ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿ ಹಂತ ಹಂತವಾಗಿ ಪಿರ್ಯಾದಿದಾರರು ಮೇಲೆ ತಿಳಿಸಿದ ವ್ಯಕ್ತಿಗಳಿಗೆ 65,00,000/- ರೂಪಾಯಿ ನಗದು ಹಣವನ್ನು ನೀಡಿರುತ್ತಾರೆ. ಪಿರ್ಯಾದಿದಾರರಿಗೂ ಮತ್ತು ಪಿರ್ಯಾದಿದಾರರ ಸಂಬಂಧಿ ಅಂಜಲಿನ್ ಡಿಸಿಲ್ವಾ ರವರಿಗೆ ಬೇರೆ ಬೇರೆ ಆಗಿ PMEGP ಅಡಿಯಲ್ಲಿ ಒಟ್ಟು 4 ಕೋಟಿ ಸಬ್ಸಿಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಾಗೂ ಬ್ಯಾಂಕ್ ನೌಕರ್ ಎಂದು ಪೋನ್‌ನಲ್ಲಿ ಮಾತನಾಡಿ ನಂಬಿಸಿ ಒಟ್ಟು 1,45,72,000/- ರೂಪಾಯಿ ಹಣ ಪಡೆದು ಮೋಸಮಾಡಿರುತ್ತಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅ.ಕ್ರ 218/2025 ಕಲಂ: 318(2),318(4), 319 ಜೊತೆಗೆ 190 BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಬ್ರಹ್ಮರ ಪೊಲೀಸರು ಆರೋಪಿ ಕೌಶಲ್ಯ ರವರನ್ನು ಈ ದಿನ ದಸ್ತಗಿರಿ ಮಾಡಿರುತ್ತಾರೆ
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






