ದಿನಾಂಕ 05.01.2026 ರಂದು 13.45 ಗಂಟೆಗೆ ಪಿರ್ಯಾದಿ ಮಹಾಂತೇಶ ಜಾಬಗೌಡ ಪೊಲೀಸ್ ಉಪನಿರೀಕ್ಷಕ ರು (ತನಿಖೆ)
ಕೋಟ ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ನಿಂತು ವಾಹನ ತಪಾಸಣೆ ಮಾಡುತ್ತಿರುವಾಗ, ತೆಕ್ಕಟ್ಟೆ ಕಡೆಯಿಂದ ಕೋಟ ಮಾರ್ಗವಾಗಿ ಬರುತ್ತಿದ್ದ ಟಿಪ್ಪರ್ ನ್ನು ನಿಲ್ಲಿಸಿ ಚಾಲಕನ ಬಳಿ ವಿಚಾರಿಸಿದಾಗ ಚಪ್ಪಡಿ ಕಲ್ಲು ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಪರವಾನಿಗೆ ಇದೆಯೇ ಎಂಬುದರ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿರುತ್ತಾನೆ. ನಂತರ ಟಿಪ್ಪರ ನಂಬ್ರ ನೋಡಲಾಗಿ KA63-8838 ಆಗಿದ್ದು ಅದರ ಚಾಲಕನ ಹೆಸರು ವಿಳಾಸ ವಿಚಾರಿಸಿದಲ್ಲಿ ತನ್ನ ಹೆಸರು ಸುರೇಶ ಎಂಬುದಾಗಿ ತಿಳಿಸಿರುತ್ತಾನೆ. ಆತನ ಬಳಿ ಚಪ್ಪಡಿ ಶಿಲೆಕಲ್ಲನ್ನು ಎಲ್ಲಿಂದ ಕಳ್ಳತನ ಮಾಡಿಕೊಂಡು ಬಂದಿರುವ ಬಗ್ಗೆ ವಿಚಾರಿಸಿದಲ್ಲಿ ತಾನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೆಲ ಕುರವಳ್ಳಿ ಗ್ರಾಮದಲ್ಲಿರುವ ಲೋಕೇಶ ಎಂಬುವರ ಕಲ್ಲು ಕೋರೆಯಿಂದ ಕಲ್ಲನ್ನು ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದು ಈ ಬಗ್ಗೆ ಪರವಾನಿಗೆ ಇದೆಯೇ ಎಂದು ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿರುತ್ತಾನೆ. ಟಿಪ್ಪರ ಚಾಲಕ ಸುರೇಶ ಮತ್ತ ಲೋಕೇಶ ರವರುಗಳು ಯಾವುದೇ ಪರವಾನಿಗೆ ಇಲ್ಲದೇ ಸರ್ಕಾರಿ ಜಾಗದಿಂದ ಲಾಭಗಳಿಸುವ ಉದ್ದೇಶಗೋಸ್ಕರ ಅಕ್ರಮವಾಗಿ ಕಲ್ಲನ್ನು ತೆಗೆದು ಕಳವು ಮಾಡಿ ಸ್ವಂತ ಲಾಭಗೋಸ್ಕರ ಬೇರೆಯವರಿಗೆ ಮಾರಾಟ ಮಾಡಲು ಹೋಗುತ್ತಿರುವುದು ಖಚಿತ ಪಡಿಸಿಕೊಂಡು ಸುಮಾರು 12 ಟನ್ ನಷ್ಟು ಚಪ್ಪಡಿ ಶಿಲೆಕಲ್ಲು ಕಲ್ಲಿನ ಅಂದಾಜು ಮೌಲ್ಯ ಸುಮಾರು 30,000/- ಆಗಬಹುದು. ಶಿಲೆಕಲ್ಲು ತುಂಬಿದ ಟಿಪ್ಪರನ್ನು ಸ್ಥಳದಲ್ಲಿ ಮಹಜರು ಮುಖೇನಾ ಸ್ವಾದೀನಪಡಿಸಿಕೊಂಡಿದ್ದಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 02-2026 ಕಲಂ:303(2) R/w 3(5) BNS &4,4 (1A),21 MMRD ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಬಗ್ಗೆ ಆರೋಪಿ ಸುರೇಶ ಪ್ರಾಯ: 54 ವರ್ಷ ತಂದೆ: ದೇವಪ್ಪಗೌಡ ವಾಸ: ಮೆಕೇರಿ,ಕವರಿ ಗ್ರಾಮ ,ಯಡೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಒಬ್ಬರನ್ನು ದಸ್ತಗಿರಿ ಮಾಡಿ, KA63-8838ನೇ ಲಾರಿಯನ್ನು ಉತ್ತಮಪಡಿಸಿಕೊಳ್ಳಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







