ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 2ನೇ ಬ್ಲಾಕ್, ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕು ರವರು ದಿನಾಂಕ:10/07/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಜಯನಗರ 2ನೇ ಬ್ಲಾಕ್, ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದದಲ್ಲಿ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ವಿತರಿಸುವ ಸಲುವಾಗಿ 62-ಲಿನೋವಾ ಟ್ಯಾಬ್ ಮತ್ತು 2-ಬ್ಯಾಟರಿಗಳನ್ನು ತಂದು ಪ್ರಾಥಮಿಕ ಆರೋಗ್ಯ ಕೇಂದ್ರದ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿಟ್ಟಿದ್ದು, ಅವುಗಳನ್ನು ಯಾರೋ ನಕಲಿ ಕೀ ಬಳಸಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸಿದ್ಧಾಮರ ಪೊಲೀಸ್ ಠಾಣೆಯಲ್ಲಿ ಕಳತನ…ಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿದ್ದಾಪರ ಪೊಲೀಸರು. ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಭಾತೀದಾರರಿಂದ ಮಾಹಿತಿಯನ್ನು ಕಲೆಹಾಕಿ, ಈ ಹಿಂದೆ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಓರ್ವ
ದಿನಾಂಕ:13/07/2024 ರಂದು ಜಯನಗರದ 2ನೇ ಹಂತದ ಖಾದಿ ಸ್ಟ್ರೀಟ್ ಹೋಟೆಲ್ ಮುಂಭಾಗದಲ್ಲಿ ಟ್ಯಾಬ್‌ನ್ನು ಮಾರಾಟ ಮಾಡುವ ಸಲುವಾಗಿ ನಿಂತಿದ್ದು, ಟ್ಯಾಬ್ ಸಮೇತ ಆತನನ್ನು ವಶಕ್ಕೆ ಪಡೆದು
ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಲಾಯಿತು. ವಿಚಾರಣಾ ಕಾಲದಲಿ ಪ್ರಕರಣಕ ಸಂಬಂಧಿಸಿದಂತೆ ಕಳ್ಳತನ ಮಾಡಿರುವುದಾಗಿ ತಪ್‌ಪಿಕೊಂಡಿರುತ್ತಾನೆ. ಆತನ ಮಾಹಿತಿ ಮೇರೆಗೆ ದಿನಾಂಕ:14/07/2024 ರಂದು ತಾನು ವಾಸವಿದ್ದ ಮನೆಯಲ್ಲಿ 61- ಲಿನೋವಾ ಟಾಬ್ ಮತ್ತು
2- ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ನಂತರ ಆತನನ್ನು ಅದೇ ದಿನ ಮಾನ, ನ್ಯಾಯಾಲಯಕ
ಹಾಜರಡಿಸಲಾಗಿ, ಮಾನ, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಬಿ ಜಗಲಾಸ, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ವಿ.ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕ್ಟರ್ ಶ್ರೀ.ಮೋಹನ್.ಡಿ ಪಟೇಲ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪಕರಣವನ್ನು ಯಶಸ್ವಿಯಾಗಿರುತ್ತಾರೆ.