ಕುಂದಾಪುರ: ಪಿರ್ಯಾದಿದಾರರಾದ ಯು ಸತೀಶ್ ಕುಮಾರ್ ಶೆಟ್ಟಿ (52), ಉಪ್ಪುಂದ ಗ್ರಾಮ ಬೈಂದೂರು,ಹಾಲಿ ವಿಳಾಸ: ನೆಂಪು ಕರ್ಕುಂಜೆ ಕುಂದಾಪುರ ಇವರು ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ನಗು ಸ್ಕ್ವ್ಯಾರ್ ಪ್ರೈ ಲಿಮಿಟೆಡ್ ನಲ್ಲಿ ಅಕೌಂಟೆಂಟ್ ಆಗಿದ್ದು ಕಂಪೆನಿಗೆ ಸಂಬಂಧಿಸಿದಂತೆ ತಲ್ಲೂರಿನಲ್ಲಿ ಹೊಸದಾಗಿ ಬಿಲ್ಡಿಂಗ್ ಕೆಲಸಕ್ಕೆ ಸಿಮೆಂಟ್ ಬೇಕಾಗಿರುವ ಕಾರಣದಿಂದ ದಿನಾಂಕ 13/10/2025 ರಂದು ಪಿರ್ಯಾದಿದಾರರು ಮೊಬೈಲ್ ನಲ್ಲಿ ಇಂಡಿಯಾ ಮಾರ್ಟ್ ಎಂಬ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಸರ್ಚ್ ಮಾಡುವಾಗ ಅದರಲ್ಲಿ ULTRATECH CEMENT LTD ಎಂಬ ಸಿಮೆಂಟ್ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ಪರಿಚಯವಾಗಿ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ ಗೆ ಕರೆ ಮಾಡಿ ಸಿಮೆಂಟ್ ಬ್ಯಾಗ್ ಬಗ್ಗೆ ವಿಚಾರಿಸಿದಾಗ ಒಂದು ಸಿಮೆಂಟ್ ಬ್ಯಾಗ್ ಗೆ 300/- ರೂಪಾಯಿ ರಂತೆ 5000 ಸಿಮೆಂಟ್ ಬ್ಯಾಗ್ ನೀಡಲು ಕೇಳಿದಾಗ ಆರೋಪಿಯು ನಮ್ಮ ಮೈನ್ ಆಫೀಸರ್ ಗೆ ಕೇಳಿ ಹೇಳುವುದಾಗಿ ಹೇಳಿ ಕರೆಯನ್ನು ಕಟ್ ಮಾಡಿರುತ್ತಾರೆ.
ಬಳಿಕ ಆಪಾದಿತನು ದಿನಾಂಕ 17/10/2025 ರಂದು ಕಂಪನಿಯ ಮೊಬೈಲ್ ಗೆ ಕೊಟೇಶನ್ ಕಳುಹಿಸಿ ಅದರಲ್ಲಿ ಒಟ್ಟು 15,00,000.66/- ರೂಪಾಯಿ ಎಂಬುದಾಗಿ ನಮೂದು ಇರುತ್ತದೆ. ಇದರ ಬಗ್ಗೆ ಪಿರ್ಯಾದಿದಾರರು ಕಂಪೆನಿಯ ಮಾಲಕರಾದ ಕುಶಲ ಶೆಟ್ಟಿರವರಿಗೆ ವಿಚಾರ ತಿಳಿಸಿ, ಪಿರ್ಯಾದಿದಾರರ ಕಂಪನಿಯು ಆರೋಪಿಯ ಮಾತನ್ನು ಹಾಗೂ ಆತನು ಕಳುಹಿಸಿಕೊಟ್ಟ ಕೊಟೇಶನ್ ನಿಜವೆಂದು ನಂಬಿಕೊಂಡು ಪಿರ್ಯಾದಿದಾರರ ಕಂಪನಿಯ ಮೊಬೈಲ್ ನಂಬ್ರದಿಂದ ಆಪಾದಿತನ ಮೊಬೈಲ್ ನಂಬ್ರ ಕ್ಕೆ ಸಿಮೆಂಟ್ ಬ್ಯಾಗ್‌ನ್ನು ಕಳುಹಿಸುವಂತೆ ಹೇಳಿದ್ದು ಆ ಸಮಯ ಆರೋಪಿತನು 6 ಲಕ್ಷ ಹಣವನ್ನು ಹಾಕುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆರೋಪಿತನು ಹೇಳಿದ ಖಾತೆಗೆ ಹಣವನ್ನು ಹಾಕಿರುತ್ತಾರೆ. ಬಳಿಕ ದಿನಾಂಕ 18/10/2025 ರಂದು ಪಿರ್ಯಾದಿದಾರರು ಆರೋಪಿ ನಂಬರ್‌ಗೆ ಕರೆ ಮಾಡಿ ಸಿಮೆಂಟ್ ಯಾವಾಗ ಬರುತ್ತದೆ ಎಂದು ವಿಚಾರಿಸಿದಾಗ 15 ಲಕ್ಷಕ್ಕೆ 70% ಅಷ್ಟು ಪೇಮೆಂಟ್ ಮಾಡಬೇಕು, ಇಲ್ಲವಾದರೇ ಸಿಮೆಂಟ್ ಬ್ಯಾಗ್ ಕಳುಹಿಸುವುದಿಲ್ಲ ಎಂಬುವುದಾಗಿ ಹೇಳಿದ್ದಕ್ಕೆ ಆರೋಪಿತನು ಹೇಳಿದ ಇನ್ನೊಂದು ಖಾತೆಗೆ ಮತ್ತೊಮ್ಮೆ 6 ಲಕ್ಷ ಹಣವನ್ನು ಜಮಾ ಮಾಡಿರುತ್ತಾರೆ. ನಂತರ ದಿನಾಂಕ 19/10/2025 ರಂದು ಆರೋಪಿತನ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಪ್ ಆಗಿ ಪಿರ್ಯಾದಿದಾರರ ಸಂಪರ್ಕಕ್ಕೆ ಸಿಕ್ಕರುವುದಿಲ್ಲ.
ULTRATECH CEMENT LTD ಎಂಬ ಸಿಮೆಂಟ್ ಕಂಪೆನಿ ಎಂದು ನಮೂದು ಮಾಡಿರುವ ಮೊಬೈಲ್ ಸಂಖ್ಯೆ ಬಳಸುವ ವ್ಯಕ್ತಿಯು ಪಿರ್ಯಾದಿದಾರರ ಕಂಪನಿಗೆ 5000 ಸಿಮೆಂಟ್ ಬ್ಯಾಗ್ ನ್ನು ಕೊಡುವುದಾಗಿ ಕಂಪೆನಿಗೆ ನಂಬಿಸಿ ಒಟ್ಟು 12 ಲಕ್ಷ ರೂಪಾಯಿಯನ್ನು ಆತನ ಅಕೌಂಟ್ ಗೆ ಹಾಕಿಸಿಕೊಂಡು ಕಂಪೆನಿಗೆ ಮೋಸದಿಂದ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2025 ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







