ದಿನಾಂಕ 15/11/2025 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಜಟ್ಕಾ ನಿಲ್ದಾಣದ ಬಳಿ“ ಹಿಂದೂ ಜಾಗರಣಾ ವೇದಿಕೆ” ಉಡುಪಿ ತಾಲೂಕು ವತಿಯಿಂದ ದೆಹಲಿ ಬಾಂಬ್ ಸ್ಪೋಟದ ಕುರಿತು ಇಸ್ಲಾಮಿಕ್ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದು, ಸದರಿ ಕಾರ್ಯಕ್ರಮದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಭಿನ್ನ ಮತಗಳ ನಡುವೆ ವೈರ, ದ್ವೇಷ ಅಥವಾ ವೈಮನಸ್ಸಿನ್ನು ಉಂಟು ಮಾಡುವಂತೆ ಪ್ರಚೋದಿಸಿ ಹಾಗೂ ಬೇರೆ – ಬೇರೆ ಧರ್ಮಗಳ ಮಧ್ಯದಲ್ಲಿ ಅಸೌಹಾರ್ದತೆ ಹಾಗೂ ದ್ವೇಷ ಉಂಟು ಮಾಡುವ ರೀತಿ ಭಾಷಣವನ್ನು ಮಾಡಿ ಸಾರ್ವಜನಿಕರಲ್ಲಿ ಗಲಭೆ-ಗೊಂದಲ ಉಂಟು ಮಾಡುವಂತಿದ್ದು, ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಾಕಾರಿ ಹೇಳಿಕೆ ನೀಡಿದ ರತ್ನಾಕರ ಅಮೀನ್ ಅಜೆಕಾರುರವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 200/2025 ಕಲಂ:196(1)̧ 353(2)ಬಿಎನ್ ಎಸ್ ಬಿ.ಎನ್‌ಎಸ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ದಿನಾಂಕ: 18.11.2025 ರಂದು ಬೆಳಿಗ್ಗೆ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ವಿ ಬಡಿಗೇರ ನೇತೃತ್ವದ ವಿಶೇಷ ತಂಡವು ಖಚಿತ ಮಾಹಿತಿಯ ಆಧಾರದ ಮೇರೆಗೆ ಪ್ರಕರಣದ ಆರೋಪಿಯಾದ ರತ್ನಾಕರ್ ಅಮೀನ್ (49), ತಂದೆ ಶೇಕರ್ ಪೂಜಾರಿ, ನಡಿಬೆಟ್ಟು ಮರ್ಣೆ, ಅಜೇಕಾರು, ಕಾರ್ಕಳ ತಾಲೂಕು ಮತ್ತು ಉಡುಪಿ ಜಿಲ್ಲೆ ಎಂಬಾತನನ್ನು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ



