ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮಾಸಚಾರಣೆ 2021 ಪ್ರಯುಕ್ತ ದಾವಣಗೆರೆ ನಗರದಲ್ಲಿ ಇಂದು ಬೈಕ್ ಜಾಥಾ ಹಮ್ಮಿಕೊಳಲಾಗಿತ್ತು. ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೀವ್ ಎಂ ರವರು ರಸ್ತೆ ಸುರಕ್ಷತಾ ಮಾಸಚಾರಣೆ ಗೆ ನಗರದ ಹೈಸ್ಕೂಲ್ ಮೈದಾನದಿಂದ ಚಾಲನೆ ನೀಡಿದರು. ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು.
ಜಾಥದಲ್ಲಿ ಆರ್.ಟಿ.ಓ ಅಧಿಕಾರಿಗಳಾದ ಶ್ರೀ ಶ್ರೀಧರ್, ನಗರ ಡಿವೈಎಸ್ಪಿ ರವರಾದ ಶ್ರೀ ನಾಗೇಶ್ ಐತಾಳ್, ಚನ್ನಗಿರಿ ಡಿವೈಎಸ್ಪಿ ರವರಾದ ಶ್ರೀ ಪ್ರಶಾಂತ್ ಮುನ್ನೊಳಿ, ಪೊಲೀಸ್ ನಿರೀಕ್ಷಕರುಗಳಾದ ಶ್ರೀ ತಿಮ್ಮಣ್ಣ, ಶ್ರೀ ಗಜೇಂದ್ರಪ್ಪ, ಶ್ರೀ ಸುರೇಶ್ ಸಗರಿ, ಶ್ರೀ ನಾಗಪ್ಪ ಬಂಕಾಳಿ ಪಿಎಸೈರವರುಗಳಾದ ಶ್ರೀ ಶ್ರೀಧರ್, ಶ್ರೀ ಇಮ್ರಾನ್, ಶ್ರೀಮತಿ ಜಯಶೀಲ, ಶ್ರೀ ಸತೀಶ್ ಬಾಬು ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿಗಳು ಹಾಗೂ ಆರ್.ಟಿ.ಓ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
