ದಿನಾಂಕ: 03-02-2021 ರಂದು ಶ್ರೀ ನರಸಿಂಹ ವಿ. ತಾಮ್ರಧ್ವಜ ಡಿವೈ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ದಾವಣಗೆರೆ ರವರ ನೇತೃತ್ವದಲ್ಲಿ ಹರಿಹರ ನಗರದಲ್ಲಿ \” 32ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಚಾರಣೆ ಅಂಗವಾಗಿ ಬೈಕ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಡಿವೈ.ಎಸ್. ಪಿ ರವರು ಹಾಗೂ ಹರಿಹರ ವೃತ್ತದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹೆಲ್ಮೆಟ್ ಧರಿಸಿ ಬೈಕ್ ಓಡಿಸುವುದರ ಮೂಲಕ ಹರಿಹರ ನಗರದ ಗಾಂಧಿನಗರ, ನಾಲಾ ಮೊಹಲ, ಹಳ್ಳದಕೇರಿ, ಶಿವಮೊಗ್ಗ ರಸ್ತೆ, ಕಾಳಿದಾಸ ನಗರ ಹಾಗೂ ನಗರದ ಮುಖ್ಯ ಬೀದಿಗಳಲ್ಲಿ ಸುತ್ತಾಡಿ ಜನರಿಗೆ ಹೆಲ್ಮೆಟ್ ಧರಿಸಿ ವಾಹನ ಚಾಲಾಯಿಸುವಂತೆ, ಕುಡಿದು ವಾಹನ ಚಲಾಯಿಸಬೇಡಿ, ಹೆಲ್ಮೆಟ್ ಧರಿಸಿ ತಮ್ಮ ಜೀವವನ್ನು ಕಾಪಾಡಿಕೊಳ್ಳಿ ಎಂಬ ಘೋಷಣೆಗಳ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಸತೀಶ ಕುಮಾರ ಸಿಪಿಐ ಹರಿಹರ ವೃತ್ತ ಕಛೇರಿ ಮತ್ತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ರವಿಕುಮಾರ ಪಿ.ಎಸ್.ಐ ಹಾಗೂ ಹರಿಹರ ನಗರ ಪೊಲೀಸ್ ಠಾಣೆಯ ಶ್ರೀ ಸುನೀಲ್ ಕುಮಾರ್ ತೇಲಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರ ಭಾಗಿಯಾಗಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,