ದಿನಾಂಕ 02.02.2021 ರಂದು ಬೆಳಿಗ್ಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73ರ ಬಂಟ್ವಾಳ ಸೂರಿಕುಮೇರು ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಕಾರ್ಯಪ್ರವೃತ್ತರಾದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರನ್ನೊಳಗೊಂಡಂತೆ ವಿಟ್ಲ ಪೊಲೀಸ್ ಠಾಣೆ, ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಮತ್ತು ಪುತ್ತೂರು ಸಂಚಾರ ಪೊಲೀಸ್ ಠಾಣೆಗಳ ಅಧಿಕಾರಿ/ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವ ಸ್ಥಳಕ್ಕೆ ಸಂಪರ್ಕಿಸುವ ಮಾಣಿ ಜಂಕ್ಷನ್, ಮಂಗಿಲಪದವು, ನೇರಳಕಟ್ಟೆ ಕ್ರಾಸ್, ಕಬಕ ಜಂಕ್ಷನ್ ಗಳಲ್ಲಿ ಬಂದೋಬಸ್ತ್ ಕೈಗೊಂಡು ಯಾವುದೇ ವಾಹನಗಳು ಸದರಿ ಸ್ಥಳಕ್ಕೆ ತೆರಳದಂತೆ ಪರ್ಯಾಯ ಮಾರ್ಗ ಸೂಚಿಸಿರುತ್ತಾರೆ ಹಾಗೂ ಅಗ್ನಿಶಾಮಕದಳವರೊಂದಿಗೆ ಸೇರಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಯಾವುದೇ ಅನಾಹುತ ಸಂಭವಿಸದಂತೆ ಸದರಿ ಗ್ಯಾಸ್ ಟ್ಯಾಂಕರನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
